ಮುಲ್ಕಿ: ನಗರ ಪಂಚಾಯತ್‌ಗೆ ಸ್ವಚ್ಛ ಭಾರತ್ ಮಿಷನ್ (ನಗರ)2.0 ಯೋಜನೆಯಡಿಯಲ್ಲಿ ಸುಮಾರು 41.5 ಲಕ್ಷ ವೆಚ್ಚದ ಎಂ ಆರ್ ಎಫ್ ಘಟಕ ನಿರ್ಮಾಣ ಕಾಮಗಾರಿಯ ಕಾರ್ಯಕ್ರಮ ನಗರ ಪಂಚಾಯತ್ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ನಡೆಯಿತು.
ಶಿಲಾನ್ಯಾಸ ನೆರವೇರಿಸಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮಹತ್ವ ನೀಡುತ್ತಿದ್ದು, ನಗರ ವಾಸಿಗಳು ಸಹಕಾರ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ವಹಿಸಿದ್ದರು.
ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಉಪಾಧ್ಯಕ್ಷೆ ಲಕ್ಷ್ಮಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯರಾದ ಸುಭಾಷ್ ಶೆಟ್ಟಿ, ಶೈಲೇಶ್ ಕುಮಾರ್, ವಂದನಾ ಕಾಮತ್, ದಯಾವತಿ ಅಂಚನ್, ರಾಧಿಕಾ ಕೋಟ್ಯಾನ್, ಮುಖ್ಯಾಧಿಕಾರಿ ಮಧುಕರ್ ಕೆ., ಆರೋಗ್ಯಾಧಿಕಾರಿ ಶಶಿರೇಖಾ, ಸ್ಥಳೀಯರಾದ ಸಾಧು ಅಂಚನ್ ಮಟ್ಟು ಅಶೋಕ್ ಜನನಿ, ವಿಠಲ್ ಎನ್.ಎ.. ಗುತ್ತಿಗೆದಾರ ಯೂಸುಫ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.