Monday, July 15, 2024
Homeರಾಜ್ಯಮುಲ್ಕಿ: ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಎಸ್ ರಾವ್ ನಗರ ಇದರ ಅದ್ದೂರಿ...

ಮುಲ್ಕಿ: ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಎಸ್ ರಾವ್ ನಗರ ಇದರ ಅದ್ದೂರಿ ಶಾಲಾ ಪ್ರಾರಂಭೋತ್ಸವ

ಮುಲ್ಕಿ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೆಎಸ್ ರಾವ್ ನಗರ ಇದರ ಅದ್ದೂರಿ ಪ್ರಾರಂಭೋತ್ಸವ ಜರಗಿತು. ಶಾಲೆಯನ್ನು ಶೃಂಗಾರಗೊಳಿಸಿ ಅತಿಥಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಶಾಲಾ ಪ್ರವೇಶ ದ್ವಾರದಿಂದ ಬ್ಯಾಂಡ್ ವಾದ್ಯಗಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮದಿಂದ ಕರೆತರಲಾಯಿತು.

ಸಭಾ ಕಾರ್ಯಕ್ರಮವು ಪ್ರಾರ್ಥನೆಯಿಂದ ಆರಂಭವಾಗಿ ಮಕ್ಕಳಿಂದ ಶಾರದಾ ದೇವಿಗೆ ಪುಷ್ಪಾರ್ಚನೆ, ತದನಂತರ ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು. ವೇದಿಕೆಯಲ್ಲಿ ತಾಲೂಕು ಮಟ್ಟದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಸ್ಥಾಪಕ ಅಧ್ಯಕ್ಷ ಲಯನ್ ವೆಂಕಟೇಶ ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು ಮಾತಾನಾಡಿದರು. ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಂಗ್ಲ ಮಾಧ್ಯಮ ಶಾಲೆಗಳ ಸ್ಪರ್ಧಾತ್ಮಕ ಸಮಯದಲ್ಲೂ ರಾಜ್ಯದ ಕೆಲವೇ ಕೆಲವು ಶಾಲೆಗಳಲ್ಲಿ ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರದ ಅನುದಾನವನ್ನು ಪಡೆದು ಇನ್ನು ಹೆಚ್ಚಿನ ಮಕ್ಕಳನ್ನು ಹೊಂದಿ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲಿ ಎಂದು ಹಾರೈಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷೆ ಜ್ಯೋತಿ, ಶಾಲಾ ಮುಖ್ಯೋಪಾಧ್ಯಾಯರಾದ ದಿನೇಶ್ ಕೆ., ಹಿರಿಯ ಶಿಕ್ಷಕರುಗಳಾದ ಸುಜಾತ, ಪದ್ಮಾವತಿ , ಶ್ರೀದೇವಿ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸರಕಾರದಿಂದ ಕೊಡಲ್ಪಡುವ ಪಠ್ಯಪುಸ್ತಕ ಸಮವಸ್ತ್ರಗಳನ್ನು ವಿತರಿಸಲಾಯಿತು. ಅಧ್ಯಾಪಕಿ ಶ್ರೀದೇವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕಿ ಸುಜಾತರವರು ವಂದನೆ ಅರ್ಪಿಸಿದರು.

RELATED ARTICLES
- Advertisment -
Google search engine

Most Popular