ಮುಲ್ಕಿ:ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಅಮೃತಾನಂದಮಯಿ ನಗರದಲ್ಲಿ ಪುಡಿ ಕಳ್ಳರ ಕಾಟ ವಿಪರೀತವಾಗಿದ್ದು ಸ್ಥಳೀಯರು ನಿದ್ರೆಯಿಲ್ಲದ ರಾತ್ರಿಗಳನ್ನು ಎದುರಿಸುವಂತಾಗಿದೆ ಎಂದು ಸ್ಥಳೀಯ ಭೀಮರಾವ್ ಯುವ ವೇದಿಕೆ ಮಾಜೀ ಅಧ್ಯಕ್ಷ ರಮೇಶ್ ಕಾರ್ನಾಡ್ ಆರೋಪಿಸಿದ್ದಾರೆ
ಅವರು ಮಾತನಾಡಿ ಕಾರ್ನಾಡ್ ಅಮೃತಾನಂದ ನಗರದ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸುಮಾರು 25ಕ್ಕೂ ಹೆಚ್ಚು ಸಾಕು ಕೋಳಿಗಳು ಕಳವಾಗಿದೆ.
ಅಮೃತಾನಂದಮಯಿ ನಗರದ ಪರಿಸರದಲ್ಲಿ ಮಧ್ಯರಾತ್ರಿ ಬಳಿಕ ಅನಾಮದೇಯ ವ್ಯಕ್ತಿಗಳು ತಿರುಗಾಡುತ್ತಿದ್ದು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಸಂಶಯ ವ್ಯಕ್ತವಾಗಿದೆ.
ಈ ಪರಿಸರದಲ್ಲಿ ಕಳೆದ ಕೆಲವು ತಿಂಗಳಿನಿಂದ ಪೊಲೀಸ್ ಬೀಟ್ ವ್ಯವಸ್ಥೆ ಕೂಡ ಸ್ಥಗಿತಗೊಂಡಿದ್ದು ಪುನರಾರಂಭಿಸಬೇಕಾದ ಅಗತ್ಯತೆ ಇದೆ ,ಈ ಬಗ್ಗೆ ಅನೇಕ ಬಾರಿ ಮುಲ್ಕಿ ಪೊಲೀಸರಿಗೆ ವಿಷಯ ತಿಳಿಸಿದರೂ ಅವರು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿರುವ ಅವರು ಕೂಡಲೇ ಮುಲ್ಕಿ ಪೊಲೀಸರು ರಾತ್ರಿ ಬೀಟ್ ವ್ಯವಸ್ಥೆ ಕಲ್ಪಿಸಿ ಪುಡಿ ಕಳ್ಳರನ್ನು ಮಟ್ಟ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಲ್ಕಿ: ಕಾರ್ನಾಡ್ ಅಮೃತಾನಂದಮಯಿ ನಗರದಲ್ಲಿ ಪುಡಿ ಕಳ್ಳರ ಕಾಟ
RELATED ARTICLES