ಮುಲ್ಕಿ: ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ರಸ್ತೆ ಅಕ್ರಮ ಮರಳುಗಾರಿಕೆಯಿಂದ ಸಂಪೂರ್ಣ ನಾಶವಾಗಿದ್ದು ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ
ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ಮೀನುಗಾರಿಕಾ ರಸ್ತೆ ನಂದಿನಿ ನದಿಯ ತಟದಲ್ಲಿದ್ದು ಮೂರು ಕಡೆ ಅಕ್ರಮ ಮರಳು ಗಾರಿಕೆಯ ದಕ್ಕೆಗಳನ್ನು ನಿರ್ಮಿಸಲಾಗಿದ್ದು ರಾತ್ರಿ ಹೊತ್ತು ಟಿಪ್ಪರ್ ಮೂಲಕ ಎಗ್ಗಿಲ್ಲದೆ ಮರಳು ಸಾಗಾಟ ನಡೆಯುತ್ತಿದೆ.

ಅಕ್ರಮ ಮರಳುಗಾರಿಕೆಯಿಂದ ರಸ್ತೆ ಪೂರ ನಾಶವಾಗಿದ್ದು ರಸ್ತೆಗೆ ಗತಿ ಗೋತ್ರ ಇಲ್ಲದಂತಾಗಿದೆ
ಕಳೆದ ಕೆಲವು ವರ್ಷಗಳ ಹಿಂದೆ ಮಾಜೀ ಸಚಿವ ಅಭಯ ಚಂದ್ರ ಜೈನ್ ಅವಧಿಯಲ್ಲಿ ಸಂಪೂರ್ಣ ಡಾಮರೀಕರಣಗೊಂಡಿದ್ದ ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ರಸ್ತೆಯ ಅಸ್ಥಿಪಂಜರ ಕಾಣಿಸುತ್ತಿದ್ದು ಅಕ್ರಮ ಮರಳುಗಾರಿಕೆ ನಿಲ್ಲಿಸದಿದ್ದರೆ ಪಂಚಾಯತ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.