ಮುಲ್ಕಿ: ಮುಲ್ಕಿಯ ಪ್ರತಿಷ್ಠಿತ ಕಾರುಣ್ಯ ಟ್ರಾವೆಲ್ಸ್ ನ ನೂತನ ಕಚೇರಿಯ ಉದ್ಘಾಟನೆ ಮುಲ್ಕಿ ಯೂನಿಯನ್ ಬ್ಯಾಂಕ್ ನ ನಾಗರಾಜ್ ಟವರ್ ಬಳಿ ನಡೆಯಿತು.
ನೂತನ ಕಚೇರಿಯನ್ನು ಉದ್ಘಾಟಿಸಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಮಾತನಾಡಿ ಗ್ರಾಹಕರಿಗೆ ಸದಾ ನಗುಮುಖದ ಸೇವೆಯ ಜೊತೆ ಸ್ನೇಹ ಬಾಂಧವ್ಯ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಉದ್ಯಮಿ ಸೌರಭ್ ಕೊಟ್ಟಾರಿ ಮಂಗಳೂರು,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ವಿಶಾಲ್ ಸಾಲ್ಯಾನ್ ಬರ್ಕೆ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಕಟ್ಟಡ ಮಾಲಕ ನಾಗರಾಜ್, ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯೆ ಪದ್ಮಿನಿ ವಿಜಯ ಶೆಟ್ಟಿ, ಡಾ. ಶ್ರೀವತ್ಸ ಉಪಾಧ್ಯಾಯ , ಜಿತೇಂದ್ರ ಭಟ್, ಭಾನುಮತಿ ಶೆಟ್ಟಿ, ಚಿತ್ರಾ ಭಟ್ ಬಪ್ಪನಾಡು, ಹಬೀಬಲ್ಲ, ಗೋಪಿನಾಥ ಪಡಂಗ, ಪ್ರಕಾಶ್ ಸುವರ್ಣ, ಪುಷ್ಪರಾಜ ಕೊಲಕಾಡಿ, ಹಾಗೂ ಯತೀಶ್ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು.ಕಾರುಣ್ಯ ಟ್ರಾವೆಲ್ಸ್ ನ ಮಾಲಕರಾದ ವೈಶಾಲಿ ಅನಿಲ್ ಕುಮಾರ್ ಸ್ವಾಗತಿಸಿದರು, ದಿನೇಶ್ ಶೆಟ್ಟಿ ನಿರೂಪಿಸಿದರು.