ಮುಲ್ಕಿ ಸುಂದರಾಂ ಶೆಟ್ಟಿ ಕಾಲೇಜ್ ಶಿರ್ವ ಇದರ ರಾಷ್ಟ್ರೀಯ ಸೇವ ಯೋಜನೆ ವಾರ್ಷಿಕ ಶಿಬಿರವು ಬೆಳ್ಮಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗುತ್ತಿದ್ದು ಭಾನುವಾರ ಅಪರಾಹ್ನ ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಬಗ್ಗೆ ಮಾಹಿತಿ ಶಿಬಿರವನ್ನು ಲಯನ್ ಪುಷ್ಪರಾಜಚೌಟ ನೆರವೇರಿಸಿದರು. ಸುಮಾರು 60 ಕ್ಕೂ ಅಧಿಕ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಯೋಜನೆ ಯೋಜನಾಧಿಕಾರಿಗಳಾದ ಹೇಮಲತಾ ಶೆಟ್ಟಿ, ರಮ್ಯಾ ಪ್ರಭಾಕರ್ ಶೆಟ್ಟಿ, ಉದ್ಯಮಿ ಬೆಳ್ಮಣ್ಣು, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಪ್ ಫಯರ್ ನ ನಿಕಟ ಪೂರ್ವ ಅಧ್ಯಕ್ಷರಾದ ಸುಧೀರ್ ಎನ್ ಬಾಳಿಗ, ಶ್ರೇಯಸ್, ಸೌಮ್ಯ ಶೆಟ್ಟಿ, ದೇವಿಕ ಮೊದಲಾದವರು ಉಪಸ್ಥಿತರಿದ್ದರು.