ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ವತಿಯಿಂದ ಅ.20ರಂದು ಸಾಹಿತಿ ಅ.ಗೌ. ಕಿನ್ನಿಗೋಳಿ ಶತಮಾನೋತ್ಸವ ಆಚರಣೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಇದೇ ವೇಳೆ ಡಾ. ಬಿ. ಜನಾರ್ಧನ ಭಟ್ ಅವರ 99, 100 ಮತ್ತು 101ನೇ ಕೃತಿಗಳ ಬಿಡುಗಡೆ ನಡೆಯಲಿದೆ. ಶ್ರೀಗಂಧ, ಮೇರಿವೆಲ್ ಶಾಲೆಯ ಬಳಿ, ಕಿನ್ನಿಗೋಳಿಯಲ್ಲಿ ಸಂಜೆ 4 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.
ಡಾ. ಕೆ. ಚಿನ್ನಪ್ಪ ಗೌಡ, ವಿಶ್ರಾಂತ ಉಪಕುಲಪತಿಗಳು ಮತ್ತು ಜಾನಪದ ವಿಧ್ವಾಂಸರು ಅ.ಗೌ. ಸಂಸ್ಮರಣೆ ಮಾಡಲಿದ್ದಾರೆ. ಈ ವೇಳೆ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ.