Tuesday, April 22, 2025
Homeಮುಲ್ಕಿಮುಲ್ಕಿ: ಮಾನಸಿಕ ಖಿನ್ನತೆ- ರೈಲ್ ನಡಿಗೆ ಬಿದ್ದು ಯುವಕ ಆತ್ಮಹತ್ಯೆ

ಮುಲ್ಕಿ: ಮಾನಸಿಕ ಖಿನ್ನತೆ- ರೈಲ್ ನಡಿಗೆ ಬಿದ್ದು ಯುವಕ ಆತ್ಮಹತ್ಯೆ

ಮುಲ್ಕಿ: ಸಮೀಪದ ಪಡುಪಣಂಬೂರು ಬೆಳ್ಳಾಯರು ಚಂದ್ರ ಮೌಳೀಶ್ವರ ದೇವಸ್ಥಾನದ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಮುಲ್ಕಿ ಸಮೀಪದ ಕೆರೆಕಾಡು ಶಾಲೆಯ ಬಳಿಯ ನಿವಾಸಿ ದೀಪಕ್ ರಾಜ್ (33) ಎಂದು ಗುರುತಿಸಲಾಗಿದೆ. ಮೃತ ದೀಪಕ್ ರಾಜ್ ಕಳೆದ ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಊರಿಗೆ ಬಂದು ನೆಲೆಸಿದ್ದರು.

ಊರಿನ ಹೋಟೆಲೊಂದದರಲ್ಲಿ ಕುಕ್ಕರ್ ಮತ್ತು ವೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ದೀಪಕ್ ರಾಜ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು. ಫೆ 3ರಂದು ರಾತ್ರಿ 10:30 ಕ್ಕೆ ಏಕಾಏಕಿ ಮನೆಯಿಂದ ಹೋಗಿದ್ದು ಬೆಳ್ಳಾಯರು ಚಂದ್ರ ಮೌಳೀಶ್ವರ ದೇವಸ್ಥಾನದ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ರೈಲಿಗೆ ತಲೆಗೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಅವಿವಾಹಿತರಾಗಿದ್ದು ತಾಯಿ ಜೊತೆ ವಾಸಿಸುತ್ತಿದ್ದರು. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular