ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಶನಿ ಮಂದಿರದ ಎದುರು ಭಾಗದಲ್ಲಿ ಕಾರು ಸ್ಕೂಟರ್ ಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶಪಾರಾಗಿದ್ದಾನೆ
ಗಾಯಗೊಂಡವರನ್ನು ರಾಜಸ್ಥಾನ ಮೂಲದ ರಾಗಾರಾಮ್ (32) ಎಂದು ಗುರುತಿಸಲಾಗಿದೆ
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ತಲುಪುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅದೇ ದಿಕ್ಕಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಅಪಘಾತದ ರಭಸಕ್ಕೆ ಸ್ಕೂಟರ್ ಚಿಪ್ಪರ್ ಚೂರಾಗಿದ್ದು, ಕಾರು ಹೆದ್ದಾರಿಯಲ್ಲಿ ಒಂದು ಸುತ್ತು ತಿರುಗಿ ನಿಂತಿದೆ.
ಕೂಡಲೇ ಸ್ಥಳೀಯರು ದಾವಿಸಿ ಸ್ಕೂಟರ್ ಸವಾರ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ.
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಕಾರು ಚಾಲಕ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ
ಮುಲ್ಕಿ:ಪಡುಪಣಂಬೂರು ಬಳಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಕಾರು-ಸವಾರ ಪವಾಡ ಸದೃಶ ಪಾರು
RELATED ARTICLES