ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ಬಳಿಯ ಕಿಲ್ಪಾಡಿ ಗ್ರಾಮದ ಕೆ ಎಸ್ ರಾವ್ ನಗರ, ಕಿನ್ನಿಗೋಳಿಯ ತಾಳಿಪ್ಪಾಡಿ ಗ್ರಾಮದ ಎಸ್. ಕೋಡಿ ಎಂಬಲ್ಲಿಯ ಏರ್ಟೆಲ್ ಕಂಪನಿಯ ಮೊಬೈಲ್ ಟವರ್ ನ ಬ್ಯಾಟರಿಗಳನ್ನು ಹಾಗೂ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮದ ನೆಲ್ಲಿಗುಡ್ಡೆ ಕ್ರಾಸ್ ಬಳಿ ಜಾಗಕ್ಕೆ ಅಳವಡಿಸಿದ್ದ 5 ಕಬ್ಬಿಣದ ಗೇಟ್ ಗಳನ್ನು ಕಳವು ಮಾಡಿದ ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಮೂಲದ ಇರುಮ್ ಪನಾಂಗಾಡು ವಿನ ಇಟ್ಟಿ ಫನಿಕರ್ (58) ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಮೊಬೈಲ್ ಟವರ್ ಗೆ ಸಂಬಂಧಿಸಿದ 39 ಬ್ಯಾಟರಿಗಳು, ಮೂರು ಕಬ್ಬಿಣದ ಗೇಟುಗಳು ಕಳವು ಮಾಡಿದ ಸೊತ್ತುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ ಗೂಡ್ಸ್ ಟೆಂಪೋ ಸಹಿತ 8 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾದೀನ ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.