ಮುಲ್ಕಿ: ಇತಿಹಾಸ ಪ್ರಸಿದ್ಧ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಪ್ರಾತಕಾಲ ವಿಶೇಷ ಪ್ರಾರ್ಥನೆ, ಪಲ್ಲಕ್ಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ವಿವಿಧ ವಾದ್ಯಘೋಷಗಳೊಂದಿಗೆ ಶಾಂಭವಿ ನದಿ ತೀರದಲ್ಲಿ ಶ್ರೀದೇವರ ನದಿ ಸ್ನಾನ ನಡೆಯಿತು
ಬಳಿಕ ಶ್ರೀ ದೇವರ ಪೇಟೆ ಸವಾರಿ ನಡೆದು ದೇವಸ್ಥಾನದಲ್ಲಿ ಶ್ರೀ ಬಿಂದು ಮಾಧವ ದೇವರಿಗೆ ಅಭಿಷೇಕ, ಸಾನಿಧ್ಯ ಹವನ, ಮಧ್ಯಾಹ್ನ ಮಹಾ ನೈವೇದ್ಯ, ಮಂಗಳಾರತಿ ನಡೆಯಿತು
ಸಂಜೆ ಭೂರಿ ಸಮಾರಾಧನೆ, ರಾತ್ರಿಪೂಜೆ, ದೀಪಾರಾಧನೆ, ಸಣ್ಣ ರಥೋತ್ಸವ, ನಿತ್ಯೋತ್ಸವ, ಭಂಡಿ ಶೇಷೋತ್ಸವ, ವಸಂತ ಪೂಜೆ ನಡೆಯಿತು
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು
ಕ್ಷೇತ್ರದಲ್ಲಿ ಡಿಸೆಂಬರ್ 15ರಂದು ಪ್ರತಿಷ್ಠಾ ಹುಣ್ಣಿಮೆ ಪ್ರಯುಕ್ತ ಕಾಶಿ ಮಠಾಧೀಶ ಶ್ರೀಮತ್ ಸoಯಮೀಂದ್ರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಉಗ್ರ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ, ಶೀಯಾಳ ಅಭಿಷೇಕ ನಡೆಯಲಿದೆ.