ಮುಲ್ಕಿ: ಪ್ರಕರಣವೊಂದರಲ್ಲಿ ಮಂಗಳೂರಿನ ಆರನೇ ಸತ್ರ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಸಾಕ್ಷಿದಾರರನ್ನು ಮುಲ್ಕಿ ಪೊಲೀಸರು ತನಿಖೆ ನಡೆಸುವ ನೆಪದಲ್ಲಿ ತಪ್ಪಿಸಿದ್ದಾರೆ ಎಂದು ಸಾಕ್ಷಿದಾರಾದ ಕಾರ್ನಾಡ್ ನಿವಾಸಿ ಉಮರ್ ಫಾರೂಕ್ ಹಾಗೂ ಮೊಹಮ್ಮದ್ ಮುಸ್ತಫಾ ಗಂಭೀರ ಆರೋಪ ಮಾಡಿದ್ದು ಮುಲ್ಕಿ ಪೊಲೀಸರ ಈ ನಡೆ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ನ್ಯಾಯಾಲಯಕ್ಕೆ ದೂರು ನೀಡಲು ತೀರ್ಮಾನಿಸಿದ್ದಾರೆ.
ಕಾರ್ನಾಡ್ ನಿವಾಸಿಗಳಾದ ಉಮರ್ ಫಾರೂಕ್ ಹಾಗೂ ಮೊಹಮ್ಮದ್ ಮುಸ್ತಫಾ ರವರು ಮಂಗಳೂರಿನ 6ನೇ ಸತ್ರ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ 47/2021ರ ಸಾಕ್ಷಿದಾರರಾಗಿದ್ದು ಜ. 6 ರಂದು ನ್ಯಾಯಾಲಯದಲ್ಲಿ ಹಾಜರಾಗಿ ಸಾಕ್ಷಿ ನುಡಿಯಬೇಕು ಎಂದು ಸಮನ್ಸ್ ಜಾರಿ ಮಾಡಿದ್ದು ಅದರಂತೆ ಸಾಕ್ಷಿದಾರರಿಬ್ಬರೂ ಮುಲ್ಕಿಯಿಂದ ಮಂಗಳೂರಿಗೆ ಬಸ್ಸಿನಲ್ಲಿ ಇಳಿದು ಮಂಗಳೂರಿನ ಪಿ ವಿ ಎಸ್ ಸರ್ಕಲ್ ಬಳಿಯಿಂದ ಆಟೋದಲ್ಲಿ ನ್ಯಾಯಾಲಯದ ಆವರಣ ತಲುಪಿದಾಗ ಏಕಾಏಕಿ ನಾಲ್ಕೈದು ಜನ ಪೊಲೀಸರು ಸುತ್ತುವರಿದು ಅದೇ ಆಟೋದಲ್ಲಿ ಕುಳ್ಳಿರಿಸಿ ಮುಲ್ಕಿ ಎಸ್ಐ ಅನಿತಾ ಇದ್ದ ಸ್ಥಳಕ್ಕೆ ಬಂದು ಬಳಿಕ ಪೊಲೀಸ್ ಜೀಪ್ ನಲ್ಲಿ ಕುಳ್ಳಿರಿಸಿದ್ದಾರೆ.
ಈ ಸಂದರ್ಭ ಸಾಕ್ಷಿದಾರರಾದ ಉಮರ್ ಫಾರೂಕ್ ಹಾಗೂ ಮೊಹಮ್ಮದ್ ಮುಸ್ತಫಾ ರವರು ನಮಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಇದೆ ಎಂದು ಕೇಳಿಕೊಂಡರು ಮಾತಿಗೆ ಬೆಲೆ ನೀಡದೆ ಪೊಲೀಸ್ ಜೀಪ್ ನಲ್ಲಿ ಕುಳ್ಳಿರಿಸಿ ಬೇಕು ಬೇಕಂತಲೇ ಮಂಗಳೂರು ನಗರವನ್ನು ಸುತ್ತಾಡಿಸಿ ಸುಮಾರು 11.50 ಮಂಗಳೂರು ನಗರದ ಬರ್ಕೆ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಧ್ಯಾಹ 2.30 ಗಂಟೆ ಸುಮಾರಿಗೆ ಅದೇ ಪೊಲೀಸ್ ಜೀಪ್ ನಲ್ಲಿ ಕುಳ್ಳಿರಿಸಿ ನಗರದ ಲೇಡಿ ಹಿಲ್ ವೃತ್ತದ ಬಳಿ ನಿಲ್ಲಿಸಿ ಮನೆಗೆ ಹೋಗಲು ತಿಳಿಸಿದ್ದಾರೆ.
ಜೀಪ್ ಅಲ್ಲಿರುವಾಗ ಸಾಕ್ಷಿದಾರರು ನಮಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಇದೆ ಎಂದು ಪರಿಪರಿಯಾಗಿ ವಿನಂತಿಸಿಕೊಂಡರು ಪೊಲೀಸರು ಅವಕಾಶ ನೀಡಿದೆ ಯಾರದೋ ಕುಮ್ಮಕ್ಕಿನಿಂದ ನ್ಯಾಯಾಲಯಕ್ಕೆ ಹಾಜರಾಗಲು ಬಿಡದೆ ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಕಿದಾರರಾದ ನಮಗೆ ಪೊಲೀಸರಿಂದ ಜೀವ ಬೆದರಿಕೆ ಇದ್ದು ನಮಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ ಹಾಗೂ ಪೊಲೀಸ್ ದೌರ್ಜನ್ಯದ ವಿರುದ್ಧ ಗೃಹ ಸಚಿವರಿಗೆ, ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡುವುದಾಗಿ ಹೇಳಿದ್ದಾರೆ.