ಮುಲ್ಕಿ: ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ಕ್ಷೇತ್ರದ ಅರ್ಚಕರಾದ ಶ್ರೀನಾಥ್ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಪುಣ್ಯಾಹ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಭಜನಾ ಕಾರ್ಯಕ್ರಮಕ್ಕೆ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಚಾಲನೆ ನೀಡಿದರು. ಈ ಸಂದರ್ಭ ಅತುಲ್ ಕುಡ್ವ, ಶಾಂಭವಿ ಕುಡ್ವ, ಸತೀಶ್ ಭಂಡಾರಿ, ರಾಮದಾಸ ಕಾಮತ್, ದೊಡ್ಡಣ್ಣ ಮೊಯ್ಲಿ, ಹರಿದೇವಾಡಿಗ, ತಾರಾನಾಥ ದೇವಾಡಿಗ, ನರೇಶ್ ಉಡುಪಿ ಉಪಸ್ಥಿತರಿದ್ದರು
ಬಳಿಕ ಶ್ರೀ ದೇವರಿಗೆ ಪುಷ್ಪಾಲಂಕಾರ, ಹೂವಿನ ಪೂಜೆ, ರಂಗ ಪೂಜೆ, ಪ್ರಸಾದ ವಿತರಣೆ ನಡೆಯಿತು