
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ಪಾದಾ ಚಾರಿಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಗಾಯಗೊಂಡವರನ್ನು ಮುಲ್ಕಿ ಒಡೆಯರ ಬೆಟ್ಟು ನಿವಾಸಿ ಸೋಮನಾಥ ಕರ್ಕೇರ (72) ಎಂದು ಗುರುತಿಸಲಾಗಿದೆ
ಗಾಯಾಳು ಸೋಮನಾಥ ಕರ್ಕೇರ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಪೆಟ್ರೋಲ್ ಬಂಕ್ ಬಳಿ ಹೆದ್ದಾರಿ ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಉಡುಪಿ ಜಿಲ್ಲೆಯ ಉಚ್ಚಿಲ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ
ಅಪಘಾತದ ರಭಸಕ್ಕೆ ಸೋಮನಾಥ ಕರ್ಕೇರಾ ರವರ ತಲೆಗೆ ಮುಖಕ್ಕೆ ಹಾಗೂ ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸಾಮಾಜಿಕ ಕಾರ್ಯಕರ್ತರಾದ ದೀಪಕ್ ಶಿಮಂತೂರು, ಸಾಧು ಅಂಚನ್ ಮಟ್ಟು ಮತ್ತಿತರರು ಸೇರಿಕೊಂಡು ಮಾನವೀಯತೆ ಮೆರೆದು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ