ಮೂಲ್ಕಿ: ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೆ ಅತೀ ಹೆಚ್ಚು ಶಾಖೆ ಹೊಂದಿದ್ದು ಕಳೆದ ೧೫೦ ಕ್ಕೂ ಹೆಚ್ಚು ವರ್ಷದಿಂದ ಉತ್ತಮ ಸೇವೆ ನೀಡುತ್ತ ಬಂದಿದ್ದು ಇದೀಗ ಹೊಸ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಜನರಿಗೆ ಹತ್ತಿರವಾಗುತ್ತಿದೆಯೆಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅದೀಕ್ಷಕ ಸುಧಾಕರ ಮಲ್ಯ ಹೇಳಿದರು. ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಭಾಭವನದಲ್ಲಿ ಕಿನ್ನಿಗೋಳಿ ಅಂಚೆ ವಲಯದ ಆಶ್ರಯದಲ್ಲಿ ನಡೆದ ಅಂಚೆ ಮಾಹಿತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹೊಸ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸುವ ಜೊತೆಗೆ ಗ್ರಾಮೀಣ ಜನರಿಗೆ ವರದಾನ ವಾಗುವ ಗ್ರಾಮೀಣ ಅಂಚೆ ಜೀವ ವಿಮೆ ಹಾಗೂ ಹೆಣ್ಣು ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ವಿಮಾ ಯೋಜನೆಗಳು ಉತ್ತಮ ಕೆಲಸ ಮಾಡುತ್ತಿದೆ ಅಂಚೆ ನೌಕರರು ಇನ್ನಷ್ಟು ಯೋಜನೆಗಳನ್ನು ಜನರಿಗೆ ಪರಿಚಯಿಸಿ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಉಪ ಅಂಚೆ ಅದೀಕ್ಷಕ ದಿನೇಶ್, ನೀರಿಕ್ಷಕ ಪ್ರದೀಪ್ ಭಂಡಾರಿ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಪೃಥ್ವಿ ರಾಜ ಆಚಾರ್ಯ, ಅಂಚೆ ಇಲಾಖೆಯ ಮಾರುಕಟ್ಟೆ ವಿಭಾದ ಮುಖ್ಯಸ್ಥ ಸುಭಾಷ್ ಪಿ ಸಾಲ್ಯಾನ್ , ದಯಾನಂದ ಕತ್ತಲ್‌ಸಾರ್, ರಾಮಚಂದ್ರ ಕಾಮತ್, ರವೀಂದ್ರ ಕುಮಾರ್, ಸನತ್ ಕುಮಾರ್ ರಾಹುಲ್ ನಾಯ್ಕ್ , ಶಕುಂತಳಾ ಶೆಟ್ಟಿ , ಪ್ರಕಾಶ್ ಶೆಟ್ಟಿ , ಚರಣ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ಚಿತ್ರ :8ಕಿನ್ನಿಗೋಳಿ ಅಂಚೆ