ಮುಲ್ಕಿ: ಮುಲ್ಕಿ ಸೀಮೆ ಅರಸು ಕಂಬಳ ಡಿಸೆಂಬರ್ 22ನೇ ತಾರೀಖಿನಂದು ನಡೆಯಲಿದ್ದು ಕಂಬಳದ ಪೂರ್ವಭಾವಿಯಾಗಿ ವಿವಿದ ಕಾರ್ಯಗಳು ಮತ್ತು ಸಂಘ ಸಂಸ್ಥೆಯಿಂದ ನಡೆಯುವಂತಹ ಶ್ರಮದಾನಗಳು ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಪಡು ಪಣಂಬೂರು ಮುಲ್ಕಿ ಅರಮನೆಯ ಬಸದಿ ದೇವರು ಶ್ರೀ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ಅರ್ಚಕರ ಬಾಬು ಇಂದ್ರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು.
ಬಳಿಕ ಕಂಬಳದ ಕರೆಗೆ ಪ್ರಸಾದ ಹಾಕುವ ಮೂಲಕ ಮುಲ್ಕಿ ಸೀಮೆ ಅರಸು ಕುಂಬಳದ ಪೂರ್ವಭಾವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಮುಲ್ಕಿ ಸೀಮೆ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ಸೀಮೆಯ ಪ್ರತಿಷ್ಠಿತ ಅರಸು ಕಂಬಳ ಯಶಸ್ವಿಗೊಳಿಸಲು ಸಹಕಾರ ಅಗತ್ಯ ಎಂದರು.
ವಕೀಲರಾದ ಚಂದ್ರಶೇಖರ್ ಕಾಸಪ್ಪಯನವರ ಮನೆ,ನವೀನ್ ಶೆಟ್ಟಿ ಎಡ್ಮೆ ಮಾರ್, ವಸಂತ್ ಬೆರ್ನಾಡ್
ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ಚಂದ್ರ ಕುಮಾರ್ ಸಸಿ ಹಿತ್ಲು,ಮಹೀಮ್ ಹೆಗ್ಡೆ ಬಪ್ಪನಾಡು,ಮಾಧವ ಶೆಟ್ಟಿ ಉತ್ರಂಜೆ,ಉದಯ ಬೆರ್ನಾಡ್, ನವೀನ್ ಪುತ್ರನ್, ವಿಜಯ ಕುಮಾರ್ ಶೆಟ್ಟಿ ಕೋಲ್ನಾಡು, ಸತೀಶ್ ,ಸುಧೇಶ್ ಕುಮಾರ್, ಸುಧೀರ್ ಶೆಟ್ಟಿ ಶಿಮಂತೂರು, ಧರ್ಮಾನಂದ ಶೆಟ್ಟಿಗಾರ್,
ಗೌತಮ್ ಜೈನ್ ಮುಲ್ಕಿ ಅರಮನೆ ಮತ್ತಿತರರು ಉಪಸ್ಥಿತರಿದ್ದರು.