ಮುಲ್ಕಿ: ಮುಲ್ಕಿ ಅರಸು ಕಂಬಳದ ಪ್ರಯುಕ್ತ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಪುನರ್ನಿರ್ಮಾಣ ಕಾರ್ಯಕ್ರಮವು ಇಂದು ಪ್ರಾರಂಭವಾಯಿತು. ಕಂಬಳದ ಸಮಯದಲ್ಲಿ ಓಟದ ಕೋಣಗಳಿಗೆ ನೀರಿನ ವ್ಯವಸ್ಥೆಗಾಗಿ ಗುಡ್ಡ ಶೇರಿಗಾರ್ ಪಡುತೋಟ ಅವರ ಸ್ಮರಣಾರ್ಥವಾಗಿ ಅವರ ಮಕ್ಕಳು ಹಾಗು ಮೊಮ್ಮಕ್ಕಳು ಕೊಡುಗೆ ನೀಡಿದ್ದಾರೆ. ಇದಕ್ಕಾಗಿ ಕೆಸರು ಕಲ್ಲು ಹಾಕುವ ಕಾರ್ಯಕ್ರಮವನ್ನು ಅರ್ಚಕರಾದ ಬಾಬು ಇಂದ್ರ ಅವರು ನೆರವೇರಿಸಿದರು. ಮುಲ್ಕಿ ಅರಮನೆಯ ಗೌತಮ್ ಜೈನ್ ಮತ್ತು ವಕೀಲರಾದ ಚಂದ್ರಶೇಖರ್ ಜಿ. ಕಾಶ್ಯಪಯ್ಯನವರ ಮನೆ,ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.