ಮೂಲ್ಕಿ ಸುಂದರಾಂ ಶೆಟ್ಟಿ ಕಾಲೇಜು ಶಿರ್ವ ದಿನಾಂಕ 01-04-2024 ರಂದು ಕಾಲೇಜಿನ ಸಭಾಂಗಣದಲ್ಲಿ ಸರೋದ್ ಸಂಗೀತ ಸುದೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಸರೋದ ವಾದಕರಾಗಿ ಶ್ರೀ ಸಚಿನ್ ಹಂಪೇಮನೆ, ಮೈಸೂರು ಹಾಗೂ ಅವರಿಗೆ ತಬಲ ಸಾತಿಯಾಗಿ ಅಶಯ್ ಕಲಾವಂತಕಾರ್ ಬಾಯರ್, ಇವರು ಆಗಮಿಸಿದ್ದು ವಿದ್ಯಾರ್ಥಿಗಳಿಗೆ ಸರೋದ್ ವಾದನದ ಪ್ರಾಚೀನತೆಯ ಕುರಿತು ಮಾಹಿತಿಯನ್ನು ಒದಗಿಸುವುದರ ಜೊತೆಗೆ ಅತ್ಯಂತ ಸುಶ್ರಾವ್ಯವಾಗಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬಂದಂತಹ ಸಂಗೀತವಾದಕರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಿಥುನ್ ಚಕ್ರವರ್ತಿ ಇವರು ಕಾಲೇಜಿನ ಪರವಾಗಿ ಪ್ರೀತಿಯ ದ್ಯೋತಕವನ್ನು ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಪ್ರಥಮ ಬಿ.ಎ ವಿದ್ಯಾರ್ಥಿನಿ ಶ್ರಾವ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ನೆರೆದ ಎಲ್ಲರನ್ನೂ ಪ್ರಥಮ ಬಿ.ಸಿ.ಎ ವಿದ್ಯಾರ್ಥಿ ಶ್ರೇಯಸ್ ವಂದಿಸಿದರು.