Monday, December 2, 2024
Homeಮುಲ್ಕಿಇತಿಹಾಸ ಪ್ರಸಿದ್ಧ ಮುಲ್ಕಿ ಒಂಭತ್ತು ಮಾಗಣೆಯ "ಮೂಲ್ಕಿ ಸೀಮೆ ಅರಸು ಕಂಬಳ" ಪೂರ್ವಭಾವಿ ಸಭೆ

ಇತಿಹಾಸ ಪ್ರಸಿದ್ಧ ಮುಲ್ಕಿ ಒಂಭತ್ತು ಮಾಗಣೆಯ “ಮೂಲ್ಕಿ ಸೀಮೆ ಅರಸು ಕಂಬಳ” ಪೂರ್ವಭಾವಿ ಸಭೆ

ಮುಲ್ಕಿ:ಇತಿಹಾಸ ಪ್ರಸಿದ್ಧ ಮುಲ್ಕಿ ಒಂಭತ್ತು ಮಾಗಣೆಯ “ಮೂಲ್ಕಿ ಸೀಮೆ ಅರಸು ಕಂಬಳ” ಡಿ. 22ರಂದು ನಡೆಯಲಿದ್ದು ಪೂರ್ವಭಾವಿಯಾಗಿ ಕಂಬಳ ಸಮಿತಿಯ ಸಭೆಯು ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕೊಲ್ನಾಡು ಗುತ್ತು ರವರ ನೇತೃತ್ವದಲ್ಲಿ ಭಾನುವಾರ ಸಂಜೆ ಮುಲ್ಕಿ ಹೋಟೆಲ್ ಆದಿಧನ್ ಸಭಾಂಗಣದಲ್ಲಿ ನಡೆಯಿತು
ಸಭೆಯಲ್ಲಿ ಬಪ್ಪನಾಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಕಂಬಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಂಬಳ ಯಶಸ್ವಿಗೆ ಶ್ರಮಿಸುತ್ತಿದ್ದು
ಸೀಮೆಯ ಅರಸರು
ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿಯ ಮುಲ್ಕಿ ಸೀಮೆಯ ಅರಸು ಕಂಬಳ ಯಶಸ್ವಿಗೊಳಿಸಬೇಕಾಗಿದೆ ಎಂದರು
ಸಮಿತಿಯ ಮೋಹನ್ ಕೋಟ್ಯಾನ್ ಶಿಮಂತೂರು ಪ್ರಾಸ್ತಾವಿವಾಗಿ ಮಾತನಾಡಿ ಮುಲ್ಕಿ ಸೀಮೆಯ ಅರಸು ಕಂಬಳದ ಮಹತ್ವದ ಬಗ್ಗೆ ತಿಳಿಸಿ ಒಗ್ಗಟ್ಟಾಗಿ ಈ ಬಾರಿಯ ಅರಸು ಕಂಬಳ ನಡೆಸಲು ಮನವಿ ಮಾಡಿದರು
ಸಭೆಯಲ್ಲಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಹಳೆಯಂಗಡಿ ಪಿಸಿಎಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಕಿಶೋರ್ ಶೆಟ್ಟಿ ದೆಪ್ಪಣಿಗುತ್ತು,, ವಿನೋದ್ ಬೊಳ್ಳೂರು, ಕೃಷ್ಣಶೆಟ್ಟಿಗಾರ್ ಪಡು ಪಣಂಬೂರು, ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.
ಸಭೆಯಲ್ಲಿ ಕಂಬಳ ಸಮಿತಿಯ ಸದಸ್ಯರು, ಕಂಬಳ ಕೋಣದ ಯಜಮಾನರು, ಮುಲ್ಕಿತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಂಬಳ ಅಭಿಮಾನಿಗಳು ಭಾಗವಹಿಸಿ ಹಲವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

RELATED ARTICLES
- Advertisment -
Google search engine

Most Popular