ಮುಲ್ಕಿ: ಕಾರ್ನಾಡ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಬೇಡಿಕೆಗೆ ಅನುಗುಣವಾಗಿ
ಎಂಆರ್‌ಪಿಎಲ್ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಶಿತಲೀಕರಣ ಯಂತ್ರ ಮಂಜೂರಾಗಿದ್ದು ಲೋಕಾರ್ಪಣೆ ಕಾರ್ಯಕ್ರಮ ಕಾರ್ನಾಡ್ ಆಟೋರಿಕ್ಷಾ ನಿಲ್ದಾಣದಲ್ಲಿ ನಡೆಯಿತು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಸಾರ್ವಜನಿಕ ಕುಡಿಯುವ ನೀರಿನ ಶಿತಲೀಕರಣ ಯಂತ್ರ ಲೋಕಾರ್ಪಣೆ ಗೊಳಿಸಿ ಮಾತನಾಡಿ ಸ್ವಯಂ ದುಡಿಮೆ ಜೊತೆಗೆ ಸಮಾಜ ಸೇವೆ ಆಟೋ ಚಾಲಕರ ಶ್ರಮಜೀವನ ಶ್ಲಾಘನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದರು. ಎಂ ಆರ್ ಪಿ ಎಲ್ ನ ಅಧಿಕಾರಿ ಸ್ಟೀವನ್ ಪಿಂಟೋ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ ಕಾರ್ನಾಡ್ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಕಿರಣ್ ಶಿಮಂತೂರು, ಕಾರ್ಯದರ್ಶಿ, ಉಮ್ಮರ್, ಮಾಜೀ ಅಧ್ಯಕ್ಷ ಶರೀಫ್ ಕಿಲ್ಪಾಡಿ, ಗೋಪಾಲ್ ಶಿಮಂತೂರು, ದಯಾನಂದ ಕಿಲ್ಪಾಡಿ, ಶಂಕರ್ ಪಡಂಗ, ಹಮೀದ್ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಗೋಪಾಲ್ ಶಿಮಂತೂರು ನಿರೂಪಿಸಿದರು.