ಮುಲ್ಕಿ: ವಸ್ತ್ರ ವ್ಯವಹಾರದಲ್ಲಿ ಹಲವು ವರ್ಷಗಳ ಅತ್ಯುತ್ತಮ ಅನುಭವ ಹೊಂದಿರುವ ಕಟ್ಪಾಡಿ ಮಹಾಮಾಯ ಸಿಲ್ಕ್ಸ್ ಸಂಸ್ಥೆಯ ಅತ್ಯಾಧುನಿಕ ವಸ್ತ್ರ ಮಳಿಗೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ದೇವಸ್ಥಾನದ ಸಮೀಪದಲ್ಲಿ ನಿರ್ಮಾಣಗೊಂಡಿರುವ ಹವಾನಿಯಂತ್ರಿತ ಕಟ್ಟಡದಲ್ಲಿ ಫೆ.3ರಂದು ಶುಭಾರಂಭಗೊಂಡಿದ್ದು ವಸ್ತ್ರ ಮಳಿಗೆಗೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಭೇಟಿ ನೀಡಿದರು. ಕಟ್ಪಾಡಿ ಮಹಾಮಾಯ ಸಿಲ್ಕ್ಸ್ ನ ಮಾಲಕರಾದ ಕೆ.ರಾಜೇಶ್ ಶೆಣೈ, ಕೆ.ಅನುರಾಧ ರಾಜೇಶ್ ಶೆಣೈ, ಸ್ವಾಮೀಜಿಯವರನ್ನು ಗೌರವಿಸಿ ಸ್ವಾಗತಿಸಿದರು.
ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿರವರು ನೂತನ ಉದ್ಯಮ ಆರಂಭಿಸಿದ ಕೆ.ರಾಜೇಶ್ ಶೆಣೈ, ಕೆ.ಅನುರಾಧ ರಾಜೇಶ್ ಶೆಣೈ ರವರನ್ನು ತಮ್ಮ ಆಶ್ರಮದ ವತಿಯಿಂದ ಸನ್ಮಾನಿಸಿ ಆಶೀರ್ವಚನ ನೀಡಿ ಉದ್ಯಮದಲ್ಲಿ ಪ್ರಾಮಾಣಿಕತೆ ಇದ್ದರೆ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯ, ಜೀವನದಲ್ಲಿ ವ್ಯವಹಾರದ ಜೊತೆಗೆ ಸಹಾಯ ಹಸ್ತದ ಮೂಲಕ ಮಾದರಿಯಾಗಿ ಎಂದರು. ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್ , ಸಂಚಾಲಕರಾದ ಪುನೀತ್ ಕೃಷ್ಣ, ಗುರುಪ್ರಸಾದ್ ಭಟ್ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದರು ಪುನೀತ್ ಕೃಷ್ಣ ಸ್ವಾಗತಿಸಿ ನಿರೂಪಿಸಿದರು.