ಮೂಲ್ಕಿ : ಒಳಲಂಕೆ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವ ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಗಳ ಶುಭಾಶೀರ್ವಾದದೊಂದಿಗೆ ಎ. 13ರಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದೆ. ಎ. 17ರ ಶ್ರೀರಾಮ ನವಮಿಯಂದು ಮಹಾ ಬ್ರಹ್ಮ ರಥೋತ್ಸವ ಜರಗಲಿದೆ ಎಂದು ಆಡಳಿತೆಯ ಪ್ರಕಟನೆ ತಿಳಿಸಿದೆ.
ಎ. 16ರಂದು ಮೃಗಬೇಟೆ ಉತ್ಸವ ಹಾಗೂ ವಿಶೇಷ ಪೂಜೆ ನಡೆಯುವುದು. ಎ. 17ರಂದು ಬೆಳಗ್ಗೆ ಶ್ರೀ ವೆಂಕಟರಮಣ ದೇವರಿಗೆ ಪಂಚಾಮೃತ ಆಭೀಷೇಕ, ಮಧ್ಯಾಹ್ನ ಮಹಾ ನೈವೇದ್ಯ, ಅನಂತರ ದೇವರು ಯಜ್ಞಕ್ಕೆ ಹೊರಡುವುದು, ಸಾಯಂಕಾಲ ಯಜ್ಞ ಪೂರ್ಣಾಹುತಿ ಹಾಗೂ ಸಂಜೆ ಬ್ರಹ್ಮರಥಾರೋಹಣ ನಡೆದು ಭೂರಿ ಸಮಾರಾಧನೆ ನಡೆಯಲಿದೆ. ಅನಂತರ ಬ್ರಹ್ಮರಥದಲ್ಲಿ ದೇವರಿಗೆ ದೀಪ ನಮಸ್ಕಾರ, ತಡರಾತ್ರಿ ಬ್ರಹ್ಮರಥೋತ್ಸವ, ವಿಶ್ರಾಂತಿ ಪೂಜೆ, ದೇವದರ್ಶನ ಸೇವೆ, ಚಂದ್ರಮಂಡಲ ಉತ್ಸವ, ವಿಶ್ರಾಂತಿ ಪೂಜೆ, ಶಯನ ಪೂಜೆ, ವಸಂತ ಪೂಜೆ ನಡೆಯುವುದು.
ಎ. 18ರಂದು ಕವಟೋದ್ಘಾಟನೆ, ಸಾಯಂಕಾಲ ಅವಕೃತ ಓಕುಳಿ ಉತ್ಸವ ನಡೆಯುವುದು. ಎ.23ರಂದು ಶತಕಲಶ ಸಂಪ್ರೋಕ್ಷಣೆ ಪ್ರಯುಕ್ತ ಪಂಚಾಮೃತ, ಕನಕಾಭಿಷೇಕ, ಗಂಗಾಭಾಗೀರಥಿ ಅಭಿಷೇಕ, ಸಂಜೆ ರತೋತ್ಸವ ಮತ್ತು ಚಂದ್ರಮಂಡಲ ಉತ್ಸವ ಹಾಗೂ ದೇವದರ್ಶನ ಸೇವೆ ನಡೆಯುವುದು.