ಮುಲ್ಕಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ(ದಕ್ಷಿಣದ 4 ರಾಜ್ಯಗಳ) ಕಾರ್ಯವಾಹ ತಿಪ್ಪೇಸ್ವಾಮಿ ರವರು ಮುಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ಆಶೀರ್ವಾದ ಪಡೆದರು. ದೇವಳದ ಪರ್ಯಾಯ ಅರ್ಚಕ ಎಂ ವಿಶ್ವನಾಥಭಟ್ ರವರು ಈ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವಳದ ವತಿಯಿಂದ ಅವರನ್ನು ಗೌರವಿಸಿದರು. ಬಳಿಕ ಅವರು ದೇವಳದ ಗೋಶಾಲೆ ಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಆರ್ ಎಸ್ ಎಸ್ ನ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಚಾಲಕ ಯಶವಂತ್ ಮುಲ್ಕಿ ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪಾರ್ಥಸಾರಥಿ ಮತ್ತು ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ಸಂಚಾಲಕ ಪಾಂಡುರಂಗ ಭಟ್, ದೇವಸ್ಥಾನದ ಪ್ರಬಂಧಕ ನಾಗೇಶ ಪೈ ಉಪಸ್ಥಿತರಿದ್ದರು.