ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ಗಾಂಧಿ ಮೈದಾನದ ಬಳಿ ಸರಕಾರಿ ಜೂನಿಯರ್ ಕಾಲೇಜಿಗೆ ಹೋಗುವ ರಸ್ತೆ ಕ್ರಾಸ್ ಬಳಿ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ತೆರೆದ ಒಳಚರಂಡಿಯಲ್ಲಿ ಹರಿದು ಹೋಗದೆ ಪರಿಸರ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದ್ದು ರೋಗಗಳ ಭೀತಿ ಎದುರಾಗಿದೆ.
ಬಹು ಮಹಡಿ ಕಟ್ಟಡದ ಮಾಲಕರು ಕಟ್ಟಡದ ತ್ಯಾಜ್ಯ ನೀರನ್ನು ಸಾರ್ವಜನಿಕ ಚರಂಡಿಗೆ ಬಿಡುತ್ತಿದ್ದಾರೆ
ಈ ಬಗ್ಗೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯಿತಿಗೆ ದೂರು ನೀಡಿದರೂ ಸೂಕ್ತ ಚರಂಡಿ ವ್ಯವಸ್ಥೆ, ಸರಿಪಡಿಸಿಲ್ಲ ಹಾಗೂ ತೆರೆದ ಸಾರ್ವಜನಿಕ ಚರಂಡಿಗೆ ಕಟ್ಟಡದ ತ್ಯಾಜ್ಯ ನೀರು ಬಿಡುವ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲು ನಗರ ಪಂಚಾಯತ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ಪರಿಸರದಲ್ಲಿ ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಿದ್ದು ಕೂಡಲೇ ಮುಲ್ಕಿ ನಗರ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತು ಒಳಚರಂಡಿ ವ್ಯವಸ್ಥೆ, ಸರಿಪಡಿಸುವುದೇ ಅಲ್ಲದೆ ತ್ಯಾಜ್ಯ ನೀರನ್ನು ಸಾರ್ವಜನಿಕ ಚರಂಡಿಗೆ ಹರಿಯ ಬಿಡುತ್ತಿರುವ ಬಹು ಮಹಡಿ ಕಟ್ಟಡದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ