ಮುಲ್ಕಿ: ತಾಲೂಕಿನ ಪಂಚ ಗ್ಯಾರೆಂಟಿ ಯೋಜನೆಯ ಪ್ರಥಮ ವಿಲೇವಾರಿ ಶಿಬಿರ ಕಿನ್ನಿಗೋಳಿ ಪಟ್ಟಣ ಪಂಚಾಯತಿನ ಸಭಾಂಗಣದಲ್ಲಿ ನಡೆಯಿತು.
ಮುಲ್ಕಿ ತಾಲೂಕು ಪಂಚ ಗ್ಯಾರೆಂಟಿ ಯೋಜನೆ ಸಮಿತಿಯ ಅಧ್ಯಕ್ಷ ಅಲ್ವಿನ್ ಕ್ಲೆಮೆಂಟ್ ಕುಟಿನ್ಹ ಮಾತನಾಡಿ ಸರಕಾರದ ಸವಲತ್ತುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ದೊರಕಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ಫಲಾನುಭವಿಗಳು ಸಹಕರಿಸಬೇಕು ಎಂದರು. ಸಭೆಯಲ್ಲಿ ಸರಿಸುಮಾರು 160 ಫಲಾನುಭವಿಗಳು ಭಾಗವಹಿಸಿದ್ದರು. ಬಹುತೇಕ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ತಾಲೂಕಿನ ಪಂಚ ಗ್ಯಾರೆಂಟಿ ಯೋಜನೆಯ ಸರ್ವ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.