ಬಿಜೆಪಿಯವರ ಕುತಂತ್ರದಿಂದಾಗಿ ಕಾಂಗ್ರೆಸ್ ಸದಸ್ಯರೊಬ್ಬರು ಸ್ಥಾನ ಕಳಕೊಂಡಿದ್ದರೂ, ಕಾರ್ಯಕರ್ತರ ಒಗ್ಗಟ್ಟಿನ ಪರಿಣಾಮದಿಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಯಿತು ಮುಂದಿನ ದಿನದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಚುನಾವಣೆಗೆ ಸಜ್ಜಾಗೋಣ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಿಥುನ್ ರೈ ನುಡಿದರು.
ಅವರು ಹಳೆಯಂಗಡಿ ಪಂಚಾಯತ್ ಎರಡನೇ ವಾರ್ಡಿನ ಉಪಚುನಾವಣೆಯಲ್ಲಿ ಜಯಭೇರಿಗಳಿಸಿದ
ಶ್ರೀಮತಿ ಸುಚಿತ್ರ ಪ್ರಸನ್ನ ಕುಮಾರ್ ರವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕೆಪಿಸಿಸಿ ಸದಸ್ಯರಾದ ಎಚ್ ವಸಂತ್ ಬರ್ನಾಡ್ ಮಾತನಾಡಿ ಬಿಜೆಪಿ ಅವರ ಯಾವ ಕುತಂತ್ರಕ್ಕೂ ಮತದಾರರು ಬೆಲೆ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮದ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪದ್ಮಾವತಿ ಶೆಟ್ಟಿ ನಾಯಕರಾದ ಶಶಿೇಂದ್ರ ಎಂ ಸಾಲಿಯನ್, ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಜಿಜ್ಯ್, ನಿರಂಜಲ ನೀತು ಶಶಿಕಲಾ ,ಅನಿಲ್ ಪೂಜಾರಿ, ಚಂದ್ರಕುಮಾರ್, ಮಾಜಿ ಅಧ್ಯಕ್ಷ ಜಲಜ ನಾಯಕರುಗಳಾದ ಧರ್ಮಾನಂದ ಶೆಟ್ಟಿಗಾರ್, ಸಂತೋಷ್ ಕೊಪ್ಪಳ ಪ್ರಸನ್ನಕುಮಾರ್, ಉತ್ತಮ್ ಕುಮಾರ್ ರಜಿಯಾ ಬಾನು ಮೊದಲಾದವರು ಇದ್ದರು.