Friday, May 23, 2025
Homeಮುಲ್ಕಿಮುಲ್ಕಿ : ಮಕ್ಕಳ ಸದೃಢ ಬೆಳವಣಿಗೆ ಬಗೆಗಿನ ಯುವ ಸಂಘಟನೆಯ ಚಿಂತನೆ ಶ್ಲಾಘನೀಯ - ಡಿಸ್ಟ್ರಿಕ್ಟ್...

ಮುಲ್ಕಿ : ಮಕ್ಕಳ ಸದೃಢ ಬೆಳವಣಿಗೆ ಬಗೆಗಿನ ಯುವ ಸಂಘಟನೆಯ ಚಿಂತನೆ ಶ್ಲಾಘನೀಯ – ಡಿಸ್ಟ್ರಿಕ್ಟ್ ಗವರ್ನರ್ ರೊ. ವಿಕ್ರಂ ದತ್ತ

ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಗ್ರಾಮ ಪಂಚಾಯತ್ ಪಡುಪಣಂಬೂರು, ಶ್ರೀ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರ ತೋಕೂರು ಇವರ ಸಹಯೋಗದಲ್ಲಿ, ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು, ಹಳೆಯಂಗಡಿ ವತಿಯಿಂದ ಡಾ. ಶೋಭಾ ರಾಣಿ ವೈದ್ಯಾಧಿಕಾರಿಗಳು ಆಯುಷ್ ಇಲಾಖೆ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಆರೋಗ್ಯ ಮತ್ತು ಕ್ಷೇಮ ಮಂದಿರ ಕೊಲ್ಲೂರು ಬಳ್ಕುಂಜೆ. ಇವರಿಂದ
ಆಯುಷ್ ಅರಿವು ಕಾರ್ಯಕ್ರಮ. ಮಕ್ಕಳಿಗೆ ಲಿವರ್ ಟಾನಿಕ್ ಹಾಗೂ ಚವನಪ್ರಾಶ ವಿತರಣೆ ಕಾರ್ಯಕ್ರಮವನ್ನು ದಿನಾಂಕ 27.11.2024 ನೇ ಬುಧವಾರ ಫೇಮಸ್ ಯೂತ್ ಕ್ಲಬ್ಬಿನ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಯಾದ ಡಾ. ಶೋಭಾ ರಾಣಿಯವರು ತನ್ನ ಮಕ್ಕಳ ಆರೋಗ್ಯ ಪಾಲನೆಯ ಬಗ್ಗೆ ಮಕ್ಕಳ ಪಾಲಕರಿಗೆ ಮಾಹಿತಿಯನ್ನು ನೀಡಿದರು ಮತ್ತು ಶ್ರೀ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ 25 ಮಕ್ಕಳಿಗೆ ಉಚಿತವಾಗಿ ಲಿವರ್ ಟಾನಿಕ್ ಮತ್ತು ಚವನ್ ಪ್ರಾಶ್ ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ರೋಟರಿ ಕ್ಲಬ್ಬಿನ ಡಿಸ್ಟ್ರಿಕ್ಟ್ ಗವರ್ನರ್ ಆದ ರೊ. ಪಿ ಎಚ್ ಎಫ್ ವಿಕ್ರಂ ದತ್ತ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಕ್ಕಳ ಸದೃಢ ಬೆಳವಣಿಗೆ ಬಗೆಗಿನ ಯುವ ಸಂಘಟನೆಯ ಚಿಂತನೆ ಶ್ಲಾಘನೀಯ ಇಂತಹ ಸೇವೆಯನ್ನು ನೀಡುವ ಯುವ ಸಂಘಟನೆಗಳು ಪ್ರತಿ ಗ್ರಾಮದಲ್ಲಿಯೂ ನಿರಂತರವಾಗಿ ಕಾರ್ಯಾಚರಿಸುವಂತಹ ಆಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಫೇಮಸ್ ಯುತ್ ಕ್ಲಬ್ಬಿಗೆ ರೋಟರಿ ಕ್ಲಬ್ ಬೈಕಂಪಾಡಿ ವತಿಯಿಂದ ನೀಡಿರುವ ಇನ್ವರ್ಟರ್ ಅನ್ನು ಹಸ್ತಾಂತರಗೊಳಿಸಲಾಯಿತು

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷರಾದ ರೊ. ಹರೀಶ್ ಬಿ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ರೊ.ಅಶೋಕ್ ಎಂ, ವಲಯ ಸೇನಾನಿ ರೊ. ಗಣೇಶ್ ಎಂ, ಅಸಿಸ್ಟೆಂಟ್ ಗವರ್ನರ್ ರೊ. ಎಂ ಪಿ ಎಚ್ ಎಫ್ ವಿಶ್ವನಾಥ ಶೆಟ್ಟಿ ಹಾಗೂ ಫೇಮಸ್ ಯೂತ್ ಕ್ಲಬ್ಬಿನ ಕಾರ್ಯದರ್ಶಿ ಹಿಮಕರ್ ಕೋಟ್ಯಾನ್ ಸದಸ್ಯರಾದ ಮೊಹಮ್ಮದ್ ಶರೀಫ್ ಮತ್ತು ಮೋಹನ್ ದಾಸ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಯೋಗೀಶ್, ಉಪಾಧ್ಯಕ್ಷರಾದ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿ ಕುಸುಮ ಎಚ್ ಕೋಟ್ಯಾನ್, ಹಿರಿಯ ಮಾರ್ಗದರ್ಶಕರಾದ ಶ್ರೀ ಗಣೇಶ್ ಜಿ ಬಂಗೇರ ಮತ್ತು ದಿನಕರ್ ಸಾಲ್ಯಾನ್ ರವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular