ಮುಲ್ಕಿ: ಪಟ್ಟಣ ಪಂಚಾಯತ್ ಮಾಸಿಕ ಸಭೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಸತೀಶ್ ಅಂಚನ್ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಮುಲ್ಕಿ ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಕೃಷ್ಣ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಲೇರಿಯಾ, ಡೇಂಗೆ, ಮಂಗನ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು
ಪ.ಪಂ. ಸದಸ್ಯ ಪುತ್ತು ಬಾವ ಮಾತನಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಯಾಲಿಸಿಸ್ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ, ಆಸ್ಪತ್ರೆಯ ಆವರಣದಲ್ಲಿ ಅಪಾಯಕಾರಿ ಮರ ಬೀಳುವ ಸ್ಥಿತಿಯಲ್ಲಿದ್ದು ತೆರವುಗೊಳಿಸಿ ಎಂದು ವೈದ್ಯರಿಗೆ ಸೂಚನೆ ನೀಡಿದರು. ಪ.ಪಂ ಸದಸ್ಯ, ಮಂಜುನಾಥ ಕಂಬಾರ, ಸುಭಾಷ್ ಶೆಟ್ಟಿ ಮಾತನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ವೃದ್ಧರಿಗೆ , ವಿಶೇಷ ಚೇತನರಿಗೆ ಪ್ರಾಮುಖ್ಯತೆ ನೀಡಿ ಎಂದರು
ಮುಲ್ಕಿ ಪೊಲೀಸ್ ಠಾಣೆ ಎಎಸ್ಐ ಸಂಜೀವ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಬೇಕು ಎಂದರು.
ಆಗ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಮಾತನಾಡಿ ಸೇವಾ ಸಂಸ್ಥೆಗಳ ಸಹಕಾರದಿಂದ ಈಗಾಗಲೇ ಕೆಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ನಿರ್ವಹಣೆ ಕೊರತೆಯಿಂದ ಮೂಲೆಗುಂಪಾಗಿದೆ. ಇದನ್ನು ಸರಿಪಡಿಸಬೇಕಾಗಿದೆ ಎಂದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಾಧಿಕಾರಿ ಮಧುಕರ್ ಸೂಚನೆ ನೀಡಿದರು
ವಿಪಕ್ಷ ಸದಸ್ಯ ಪುತ್ತುಭಾವ ಮಾತನಾಡಿ ವಾರ್ಡ್ನಲ್ಲಿ ಕಾಮಗಾರಿಗಳು ನಡೆಸುವಾಗ ಆಯಾ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದರು.
ಕಾರ್ನಾಡ್ ದರ್ಗಾ ರಸ್ತೆ ಕಾಮಗಾರಿ ಸರಿಯಾಗಿಲ್ಲ, ಮೂಢಾ ದಿಂದ ಕಾರ್ನಾಡ್ ಬಳಿ ಕೆರೆ ತಡೆಗೋಡೆ ಕಾಮಗಾರಿ ಕಳಪೆಯಾಗಿದ್ದು ಎರಡನೇ ಬಾರಿ ಕುಸಿದು ಬಿದ್ದಿದೆ ಎಂದು ಆರೋಪಿಸಿದರು.
ಇದಕ್ಕೆ ಸದಸ್ಯೆ ವಿಮಲಾ ಪೂಜಾರಿ ಸಹಮತ ವ್ಯಕ್ತಪಡಿಸಿ ಟೆಂಡರ್ ಕಾಮಗಾರಿಗಳಲ್ಲಿ ಪಾರದರ್ಶಕತೆ ಇಲ್ಲ. ಹೊರಗಿನವರು ಗುತ್ತಿಗೆ ಪಡೆದು ಕಳಪೆ ಕಾಮಗಾರಿ ನಡೆಸುತ್ತಿದ್ದು ಜನರು ಪ.ಪಂ. ಸದಸ್ಯರನ್ನು ದೂರುತ್ತಾರೆ , ಪಟ್ಟಣ ಪಂಚಾಯತ್ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಕೇವಲ ದಲ್ಲಾಳಿಗಳಿಗೆ ಮಾತ್ರ ಮಣೆ ಹಾಕುತ್ತಾರೆ ಕಳೆದ ಒಂದುವರೆ ವರ್ಷದಿಂದ ಪ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ.ಪಂ ಸದಸ್ಯ ಬಾಲಚಂದ್ರ ಕಾಮತ್ ಮಾತನಾಡಿ ಜಿಲ್ಲಾಧಿಕಾರಿಗಳು ಪಟ್ಟಣ ಪಂಚಾಯತಿಗೆ ಬರುವಾಗ ನಮಗೆ ಯಾಕೆ ಮಾಹಿತಿ ನೀಡಿಲ್ಲ? ಎಂದು ಕೇಳಿದಾಗ ಅಧ್ಯಕ್ಷ ಸತೀಶ್ ಅಂಚನ್ ಉತ್ತರಿಸಿ ಜಿಲ್ಲಾಧಿಕಾರಿಗಳು ಆಡಳಿತಕ್ಕೆ ಯಾವುದೇ ಮಾಹಿತಿ ನೀಡಿ ಬಂದಿಲ್ಲ ಎಂದರು.
ಪ.ಪಂ.ಸದಸ್ಯ ಭೀಮಾ ಶಂಕರ್ ಮಾತನಾಡಿ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಬಾಬು ಜಗಜೀವನ್ ರಾಮ್ ಉದ್ಯಾನವನ , ಶೌಚಾಲಯ, ಕಸ ತ್ಯಾಜ್ಯ ವಿಲೇವಾರಿ ಅವ್ಯವಸ್ಥೆಗಳ ಆಗರವಾಗಿದ್ದು ಸರಿಪಡಿಸಲು ಅನೇಕ ಬಾರಿ ಪಂಚಾಯಿತಿಗೆ ದೂರು ನೀಡಿದರೂ ಇದುವರೆಗೂ ಸರಿಪಡಿಸಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸುಭಾಷ್ ಶೆಟ್ಟಿ ,ವಂದನಾ ಕಾಮತ್ ಮಾತನಾಡಿ ಪಟ್ಟಣ ಪಂಚಾಯತ್ ಕಸ ತ್ಯಾಜ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಮೆಡಲಿನ್ ಶಾಲೆಯ ಬಳಿಯ ಡಂಪಿಂಗ್ ಯಾರ್ಡ್ ನ ತ್ಯಾಜ್ಯ ನೀರು ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಹರಿಯುತ್ತಿದ್ದು ಪರಿಸರ ದುರ್ವಾಸನೆಯಿಂದ ಕೂಡಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರ ಕೊರತೆ,ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಕ್ರಮ ಪೈಪು ಜೋಡಣೆ ತೆರವು, ಕಾರ್ನಾಡ್,ಗೇರುಕಟ್ಟೆ ರಾಜ್ಯ ಹೆದ್ದಾರಿ ರಸ್ತೆ ಹೊಂಡ ದುರಸ್ತಿ, ವಿಜಯ ಸನ್ನಿಧಿ ಕಟ್ಟಡದ ನರ್ಸಿಂಗ್ ಹಾಸ್ಟೆಲ್ ತ್ಯಾಜ್ಯ ನೀರು ಸೋರಿಕೆಯಾಗಿ ದುರ್ವಾಸನೆ, ಮಾನಂಪಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಹೈವೇ ಅಧಿಕಾರಿಗಳಿಂದ ಗೂಡಂಗಡಿ ಮಾಲೀಕರಿಗೆ ಕಿರುಕುಳ, ಹೆಜಮಾಡಿ ಟೋಲ್ ನ ಮುಲ್ಕಿ ಪಟ್ಟಣ ಪಂಚಾಯತ್ ಸದಸ್ಯರಿಗೆ ರಿಯಾಯತಿ ರದ್ದು,ಕಾರ್ನಾಡ್ ಯಂಗ್ ಸ್ಟಾರ್ ಬಳಿ ಕ್ರೀಡಾಂಗಣ ಹಾಗೂ ಅಂಗನವಾಡಿ ನಿರ್ಮಾಣ, ಸಾರ್ವಜನಿಕ ಹಿಂದೂ ರುದ್ರ ಭೂಮಿಗೆ ಕಸ ಕಡ್ಡಿ ಹಾಕಲು ಬಾಕ್ಸ್ ಅಳವಡಿಕೆ, ಕಾರ್ನಾಡ್ ಸಂತೆ ಮಾರುಕಟ್ಟೆ ನಲ್ಲಿ ಕಾರ್ಯಾಚರಿಸುತ್ತಿರುವ ಅಂಗಡಿ ಕೋಣೆಗಳ ದಿನ ಬಾಡಿಗೆ ಶೇಕಡ 50ರಷ್ಟು ಹೆಚ್ಚಳ, ಹಾಗೂ ಪ.ಪಂ. ವ್ಯಾಪ್ತಿಯ ಗೂಡಂಗಡಿ ಸರ್ವೆ ಮಾಡಿ ತೆರಿಗೆ ಹೆಚ್ಚಳ, ಬೀದಿ ನಾಯಿ ಸಂತಾನ ಹರಣ ಚಿಕಿತ್ಸೆ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಮುಲ್ಕಿ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಗೌರವಿಸಲಾಯಿತು. ಸರಕಾರದ ಮೂಲಕ ಮುಲ್ಕಿ ಪಟ್ಟಣ ಪಂಚಾಯತಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಲೋಕೇಶ್ ಕೋಟ್ಯಾನ್, ತಿಲಕ್ ಪೂಜಾರಿ, ಭೀಮಶಂಕರ್ ರವರನ್ನು ಗೌರವಿಸಲಾಯಿತು.
ನೂತನ ಸ್ಥಾಯಿ ಸಮಿತಿಯ ಬಿಜೆಪಿ ಪಕ್ಷದ ಸದಸ್ಯರಾಗಿ ಹರ್ಷರಾಜ ಶೆಟ್ಟಿ, ವಂದನ ಕಾಮತ್, ಶಾಂತಾ ಕಿರೋಡಿಯನ್, ದಯಾವತಿ ಅಂಚನ್ ಹಾಗೂ ಕಾಂಗ್ರೆಸ್ ಸದಸ್ಯರಾಗಿ ಬಾಲಚಂದ್ರ ಕಾಮತ್ ಸಂದೀಪ್ ಕುಮಾರ್ ಮುನ್ನಾ ಯಾನೆ ಮಹೇಶ್ ರವರನ್ನು ಆಯ್ಕೆ ಮಾಡಲಾಯಿತು.
ಮುಲ್ಕಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ದನ್ಯವಾದ ಅರ್ಪಿಸಿದ
ಮುಲ್ಕಿ: ಪಟ್ಟಣ ಪಂಚಾಯತ್ ಮಾಸಿಕ ಸಭೆ
RELATED ARTICLES