ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತುಳಸಿ ಪೂಜೆ ಹಾಗೂ ಕಾರ್ತಿಕ ಮಾಸದ ದೀಪೋತ್ಸವದ ಬಲಿ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ಪ್ರಾತಕಾಲ ವಿಶೇಷ ಪ್ರಾರ್ಥನೆ, ತುಳಸಿ ಪೂಜೆ, ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ
ರಾತ್ರಿ ತುಳಸಿ ಪೂಜೆ ಹಾಗೂ ಕಾರ್ತಿಕ ಮಾಸದ ದೀಪೋತ್ಸವದ ಶ್ರೀ ದೇವರ ಉತ್ಸವಬಲಿ ನಡೆಯಿತು
ಈ ಸಂದರ್ಭ ದೇವಸ್ಥಾನದ ಅರ್ಚಕ ನರಸಿಂಹ ಭಟ್, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಸುನಿಲ್ ಆಳ್ವ, ಗೋಪಾಲಕೃಷ್ಣ ಉಪಾಧ್ಯಾಯ, ಶ್ರೀನಾಥ್ ಭಟ್, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ, ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ: ಬಪ್ಪನಾಡು ದೇವಸ್ಥಾನದಲ್ಲಿ ವಿಜೃಂಭಣೆಯ ತುಳಸಿ ಪೂಜೆ; ಕಾರ್ತಿಕ ದೀಪೋತ್ಸವ ಬಲಿ
RELATED ARTICLES