ಮುಲ್ಕಿ:ಪಂಜಿನಡ್ಕ ಶ್ರೀ ವಿಠೋಬ ರುಕುಮಾಯಿ ಮಂದಿರದಲ್ಲಿ ಭಜನಾ ಮಂಗಲೋತ್ಸವವು ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಅರ್ಚಕರಾದ ಪುರುಷೋತ್ತಮ ಭಟ್ ಪರೆಂಕಿಲ ನೇತೃತ್ವದಲ್ಲಿ ಗಣ ಹೋಮ, ಸಾನಿಧ್ಯ ಕಲಶಾಭಿಷೇಕ, ಅಶ್ವತ್ಥ ಪೂಜೆ, ಕಲಶ ಪ್ರತಿಷ್ಠೆ, ನಡೆಯಿತು.
ಭಜನಾಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಭಜನಾ ಮಂದಿರದ ಅಧ್ಯಕ್ಷ ಟಿ ಪ್ರಭಾಕರ ಶೆಟ್ಟಿ, ಗೌರವಾಧ್ಯಕ್ಷ ನಿತಿನ್ ಕೆ ಶೆಟ್ಟಿ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಕುಕ್ಯಾನ್, ಅನಿಲ್ ಕೆ.ಕುಮಾರ್, ಕಾರ್ಯದರ್ಶಿ ಪಿ ಶ್ರೀಮಂತ ಕಾಮತ್, ಕೋಶಾಧಿಕಾರಿ ಸುದೇಶ್ ಶೆಟ್ಟಿ, ಉದಯ್ ದೇವಾಡಿಗ, ಚಂದ್ರಕಾಂತ ಶೆಟ್ಟಿ, ಶಾಂತಾ ರಾಮ ಶೆಟ್ಟಿ ತೆಂಗಾಳಿ
ಹರೀಶ್ ಶೆಟ್ಟಿ, ದಿನೇಶ್ಚಂದ್ರ ಅಜಿಲ ಮತ್ತಿತರರು ಉಪಸ್ಥಿತರಿದ್ದರು.