ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಪ್ರಾತಃಕಾಲ ಶ್ರೀ ದೇವರಿಗೆ ನಜರು ಕಾಣಿಕೆ ನಡೆಯಿತು
ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ದೇವರ ಭೇಟಿ, ಪಾದಪೂಜೆ, ಮಹಾ ಪ್ರಾರ್ಥನೆ, ಶ್ರೀ ಉಗ್ರ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ, ಶೀಯಾಳ ಅಭಿಷೇಕ, ಕನಕಾಭಿಷೇಕ,ಗಂಗಾ ಭಾಗೀರಥಿ ಅಭಿಷೇಕ, ನಡೆಯಿತು
ಸಂಜೆ 6:30ಕ್ಕೆ ಮಹಾಪೂಜೆ, ಮಹಾ ನೈವೇದ್ಯ, ಮಂಗಳಾರತಿ, ಭೂರಿ ಸಮಾರಾಧನೆ, ರಾತ್ರಿ ಪೂಜೆ, ದೀಪಾರಾದನೆ, ರಥೋತ್ಸವ, ಸ್ವರ್ಣ ಗರುಡೋತ್ಸವ, ಚಂದ್ರಮಂಡಲ ಉತ್ಸವ ವಸಂತ ಪೂಜೆ ನಡೆಯಿತು
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು
ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರಿಂದ ಶ್ರೀ ದೇವರಿಗೆ ಸಿಯಾಳ ಸಮರ್ಪಣೆಯಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.