Saturday, September 14, 2024
Homeಪುತ್ತೂರುಕುಮಾರಿ ದೀಪ್ತಿ ಅಡ್ಡಂತ್ತಡ್ಕ ಇವರಿಗೆ ಬಹುಮುಖ ಪ್ರತಿಭೆ "ಪುನೀತ ಪ್ರಶಸ್ತಿ"2024

ಕುಮಾರಿ ದೀಪ್ತಿ ಅಡ್ಡಂತ್ತಡ್ಕ ಇವರಿಗೆ ಬಹುಮುಖ ಪ್ರತಿಭೆ “ಪುನೀತ ಪ್ರಶಸ್ತಿ”2024

ಚೇತನ ಪೌಂಡೇಷನ್ ಕರ್ನಾಟಕ ಆಯೋಜಿಸಿದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಇವರ ಜನ್ಮ ದಿನದ ಸವಿ ನೆನಪಿಗಾಗಿ ಮಾರ್ಚ್ 23.03.2024 ಮತ್ತು 24.03.2024ರಂದು ಧಾರವಾಡದ ರಂಗಾಯಣದಲ್ಲಿ ಆಯೋಜಿಸಲಾದ ಕರ್ನಾಟಕ ಚಲನಚಿತ್ರೋತ್ಸವ 2024 ಈ ಕಾರ್ಯಕ್ರಮದಲ್ಲಿ ಇವರನ್ನು ಬಹುಮುಖ ಪ್ರತಿಭೆ ಎಂದು ಗುರುತಿಸಿ ಪ್ರಸಕ್ತ ಸಾಲಿನ “ಪುನೀತ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು. ಇವರು ಪ್ರಸ್ತುತ ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು ಇಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದು. ಇವರು ವಿವಿಧ ಬಗೆಯ ನೃತ್ಯ, ಯೋಗಾಸನ, ಯಕ್ಷಗಾನ ಅರ್ಥಗಾರಿಕೆ, ನಾಟಕ ನಿರ್ದೇಶನ, ಟೈಲರಿಂಗ್ ಜೊತೆಗೆ ಖೋ ಆಟಗಾರ್ತಿ ಕೂಡ, ವಿಜಯವಾಣಿ, ಹೊಸದಿಗಂತ, ಉದಯವಾಣಿ, tv9ವೆಬ್, ಉಪಯುಕ್ತ, ಮೇಘದೂತ ವೆಬ್, ಜನಜೀವಾಳ, ಭಾರತ ವೈಭವ, ತುಳುನಾಡು ವಾರ್ತೆ, ಸುದ್ದಿ ಪುತ್ತೂರು, ಅಮರ ಸುದ್ದಿ ಹೀಗೆ ಹಲವಾರೂ ಪತ್ರಿಕೆಗಳಲ್ಲಿ ಇವರ 200ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿದೆ. ಜಿಲ್ಲಾ ,ರಾಜ್ಯ,ಅಂತರ್ ರಾಜ್ಯಮಟ್ಟದ ಹಲವಾರೂ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ . ಸುಮಾರು 500ಕ್ಕೂ ಅಧಿಕ ನಾನಾ ಕ್ಷೇತ್ರಗಳಲ್ಲಿ ವೇದಿಕೆ ಹತ್ತಿದ ಅನುಭವದ ಜೊತೆ, ಕ್ರೀಡಾ ಕ್ಷೇತ್ರದಲ್ಲೂ ಜಿಲ್ಲಾಮಟ್ಟದಲ್ಲಿ ಹಲವಾರೂ ಪ್ರಶಸ್ತಿ ಗಳಿಸಿರುತ್ತಾರೆ. ಯೋಗದಲ್ಲೂ ಹಲವಾರೂ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. 2024ರ ವಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿರುತ್ತಾರೆ.

RELATED ARTICLES
- Advertisment -
Google search engine

Most Popular