Wednesday, January 15, 2025
Homeಕ್ರೀಡೆಮೂಲ್ಯರ ಯಾನೆ ಕುಲಾಲ್ ಸಂಘ(ರಿ.) ಶಿರ್ಲಾಲು ಅಳದಂಗಡಿ

ಮೂಲ್ಯರ ಯಾನೆ ಕುಲಾಲ್ ಸಂಘ(ರಿ.) ಶಿರ್ಲಾಲು ಅಳದಂಗಡಿ

ಮೂಲ್ಯರ ಯಾನೆ ಕುಲಾಲ್ ಸಂಘ(ರಿ)ಶಿರ್ಲಾಲು ಅಳದಂಗಡಿ ಇದರ ಆಶ್ರಯದಲ್ಲಿ ಬಡವರ ಉನ್ನತ ಶಿಕ್ಷಣ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯನಿಧಿ ಒದಗಿಸುವ ನಿಟ್ಟಿನಲ್ಲಿ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟ ಕುಲಾಲ್ ಟ್ರೋಫಿ-2024 ದಿನಾಂಕ: 12/05/2024 ಆದಿತ್ಯವಾರ ಅಳದಂಗಡಿ ಸತ್ಯದೇವತೆ ಮೈದಾನದಲ್ಲಿ ನಡೆಯಲಿದೆ.

ಪ್ರಥಮ : 11111 ನಗದು ಮತ್ತು ಕುಲಾಲ್ ಟ್ರೋಫಿ

ದ್ವಿತೀಯ : 8888 ನಗದು ಮತ್ತು ಕುಲಾಲ್ ಟ್ರೋಫಿ

ಉತ್ತಮ ಶಿಸ್ತಿನ ತಂಡಕ್ಕೆ ಕುಲಾಲ್ ಟ್ರೋಫಿ ಉತ್ತಮ ಎಸೆತಗಾರ ಉತ್ತಮ ದಾಂಡಿಗ ಮತ್ತು ಸರಣಿ ಶ್ರೇಷ್ಠ ಬಹುಮಾನ ನೀಡಿ ಗೌರವಿಸಲಾಗುವುದು.

ನಿಯಮಗಳು :

ಪ್ರವೇಶ ಶುಲ್ಕ 1000

1) ಬೆಳ್ತಂಗಡಿ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶ

2) ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ

3) ಪಂದ್ಯಾಟವು 4 ಓವರ್‌ಗೆ ಸೀಮಿತವಾಗಿರುತ್ತದೆ

4) ಲೆಗ್ ಸ್ಪಿನ್‌ಗೆ ಮಾತ್ರ ಅವಕಾಶ

5) ಒಬ್ಬರಿಗೆ ಒಂದು ಓವರ್ ಮಾತ್ರ ಎಸೆಯಲು ಅವಕಾಶ

6) ಮೊದಲು ನೋಂದಾಯಿಸಿದ 20 ಸ್ವಜಾತಿ ಬಾಂಧವರ ತಂಡಗಳಿಗೆ ಮಾತ್ರ ಅವಕಾಶ

7) ಮೇ 5 ರ ಒಳಗಾಗಿ 500 ರೂಪಾಯಿ ಪಾವತಿಸಿ ತಮ್ಮ ತಂಡವನ್ನು ನೋಂದಾಯಿಸಿಕೊಳ್ಳಬೇಕು

8) ಅಂಪೈರ್ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ

9) ಪಂದ್ಯಾಟವು ಸಮಬಲಗೊಂಡಲ್ಲಿ ನಾಣ್ಯ ಚಿಮ್ಮುವಿಕೆಯ ಮೂಲಕ ವಿಜಯಿ ತಂಡವನ್ನು ಘೋಷಿಸಲಾಗುವುದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7760018169 , 8197361705, 9108768489,9108768489,9901324345

RELATED ARTICLES
- Advertisment -
Google search engine

Most Popular