ಬಂದಾರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಕ್ಕೆ ಸೇರಿ ಸಂಘದಲ್ಲಿ ಸಿಡ್ಬಿ ಸಾಲದ ಮೂಲಕ ಆರ್ಥಿಕವಾಗಿ ವ್ಯವಹಾರ ನಡೆಸಿ ಸ್ವ ಉದ್ಯೋಗ ನಡೆಸುತ್ತಿರುವ ಬೈಪಾಡಿ ಒಕ್ಕೂಟದ ಕೋಡಿಮಜಲು ಹರೀಶ್ ಮತ್ತು ಶೋಭಾ ದಂಪತಿಯವರು ನಡೆಸುತ್ತಿರುವ ಸಿದ್ಧಿಶ್ರೀ ಲೀಫ್ ಕಪ್ ಇಂಡಸ್ಟ್ರೀಸ್ ಹಾಳೆ ತಟ್ಟೆ ಘಟಕಕ್ಕೆ ಭೇಟಿ ನೀಡಿ, ಉದ್ಯೋಗ ಮಾಡಲು ಪ್ರೇರಣೆ, ಸಂಘದ ಸಾಲದ ಬಗ್ಗೆ, ಬ್ಯಾಂಕ್ ಸಾಲದ ಬಗ್ಗೆ ,ಸಂಘದಿಂದ ಉಪಯೋಗ, ಸಿಡ್ಬಿ ಸಾಲದ ಬಗ್ಗೆ ಸದಸ್ಯರಿಂದ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ನಬಾರ್ಡ್ ಬ್ಯಾಂಕ್ ನ ಡಿ.ಜಿ.ಎಂ ಸಂಧ್ಯಾ ನಾಗೇಶ್, ಗ್ರಾಮೀಣ ಶ್ರೇಷ್ಟತಾ ಕೇಂದ್ರ ಲಾಯಿಲಾ ಇದರ ಪ್ರಾಂಶುಪಾಲರರಾದ ಸೋಮನಾಥ್.ಕೆ , ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ ಕುಮಾರ್, ವಲಯ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿದಿ ಪ್ರಮೀಳಾ, ಮತ್ತು ಮನೆಯವರು ಉಪಸ್ಥಿತರಿದ್ದರು.
ಮುಂಬೈ, ಗೋವಾ, ಮಹಾರಾಷ್ಟ ನಬಾರ್ಡ್ ಬ್ಯಾಂಕ್ ಅಧಿಕಾರಿಯವರಿಂದ ಸಿಡ್ಬಿ ಸಾಲ ಪಡೆದು ಸ್ವ ಉದ್ಯೋಗ ನಡೆಸುತ್ತಿರುವ ಘಟಕ ಭೇಟಿ
RELATED ARTICLES