ಉಡುಪಿ: ಅಖಿಲ ಕರ್ನಾಟಕ ಬೆಳಂದಿಗಳ ಸಾಹಿತ್ಯ  ಸಮ್ಮೇಳನ ಸಮಿತಿ ವತಿಯಿಂದ ಪ್ರಥಮ ಬಾರಿಗೆ ಮುಂಬಯಿ ನಮನ ಕಾರ್ಯಕ್ರಮ ಮುಂಬಯಿ ವಾಪಾಸಿಗರ ಸಮ್ಮಿಲನ ವು ಅಕ್ಟೋಬರ್ 16ರಂದು ಭಾನುವಾಋ ಬೆಳಿಗ್ಗೆ 9 ರಿಂದ 6ರವರೆಗೆ ಶ್ರೀ ಮಹಾಕಾಳಿ ಜನಾರ್ಧನ ದೇವಸ್ಥಾನದ ಭವಾನಿ ಮಂಟಪ ಅಂಬಲಪಾಡಿ ಉಡುಪಿಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಮುಂಬಯಿ ಕನ್ನಡಿಗರ ಆಗ್ರಮಾನ್ಯ ಸಂಸ್ಥೇ ಕನ್ನಡ  ಸೇವಾ ಸಂಘ ಪೂವಾಯಿ ಇದರ ಬೆಳ್ಳಿಹಬ್ಬದ ಕ್ಷಣ ಹಾಗೂ ಭಾರತದ ವಿಭಿನ್ನ ವಿಶಿಷ್ಟ ಸಾಧನ ಶೀಲ ಜಿಲ್ಲೆ  ಉಡುಪಿ ಬೆಳ್ಳಿ ಹಬ್ಬ ಸಂಭ್ರಮ ನಡೆಯಲಿದೆ

 ಕನ್ನಡಿಗರ, ತುಳುವರ ಎರಡನೇ ತವರು ಮುಂಬಯಿ ತಾಯಿಯಂತಹ ಮುಂಬಯಿ ಸಾವಿರಾರು  ಮಂದಿಯ ಬದುಕು ಕಟ್ಟಿದ ಕನಸಿನ ನಗರಿ. ಮುಂಬಯಿಯಲಿದ್ದು ಈಗ ತಮ್ಮ ತವರಿಗೆ ಮರಳಿ ಬಂದು ನೆಲೆಸಿರುವ ಮುಂಬಯಿ ವಾಪಾಸಿಗರ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕಾರ್ಯಕ್ರಮವು ಡಾ. ಶೇಖರ ಅಜೆಕಾರ್‌ ಅವರ ಸಾರಥ್ಯದಲ್ಲಿ ನಡೆಯಲಿದೆ.

Leave a Reply

Your email address will not be published.