ಮುಂಡಾಜೆ :ಅಮೃತ ಭಾರತಿ ವಿದ್ಯಾಕೇಂದ್ರ CBSE ಹೆಬ್ರಿ ಇಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ 19ರ ವಯೋಮಾನದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕು ಮುಂಡಾಜೆ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಆಂಧ್ರಪ್ರದೇಶದಲ್ಲಿ ನಡೆಯುವ ಕ್ಷೇತ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ.ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತಂಡದ ತರಬೇತುದಾರದ ಸಂದೀಪ್ ಶೆಟ್ಟಿ ಮುಂಡಾಜೆ ಇವರಿಗೆ ಶಾಲಾಭಿವೃದ್ದಿ ಸಮಿತಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಪೋಷಕ ವೃಂದ ಅಭಿನಂದನೆ ಸಲ್ಲಿಸಿದರು.