Thursday, July 25, 2024
Homeಮಂಗಳೂರುಮುಂಡ್ಕೂರು: ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಪಡಿತ್ತಾರ್ ಸೇತುವೆ

ಮುಂಡ್ಕೂರು: ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಪಡಿತ್ತಾರ್ ಸೇತುವೆ

ಬಜ್ಪೆ ಅತ್ರಾಡಿ ರಾಜ್ಯ ಹೆದ್ದಾರಿಯ ಮುಂಡ್ಕೂರು ಗ್ರಾಮದ ಪಡಿತ್ತಾರು ಕಿರು ಸೇತುವೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಹಳೆ ಸೇತುವೆ ಶಿಥಿಲಗೊಂಡ ಪರಿಣಾಮ ಹೊಸ ಸೇತುವೆ ನಿರ್ಮಾಣಗೊಂಡಿದೆ. ಆದರೆ ಸೇತುವೆಯ ಬದಿಗೆ ಹಾಕಿದ ಮಣ್ಣು, ಮಳೆ ನೀರಿನಲ್ಲಿ ಕಿತ್ತುಕೊಂಡು ಹೋಗಿದ್ದು ತಡೆಗೋಡೆ ಇಲ್ಲದೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ವಾಹನ ಸವಾರರು ಸ್ವಲ್ಪ ಎಡವಟ್ಟಾದರೂ ಸೇತುವೆಯ ಕೆಳಗೆ ಬೀಳುವ ಸಂಭವವಿದೆ. ಬೆಳ್ಮಣ್ ನಿಂದ ಮುಂಡ್ಕೂರು, ಕಿನ್ನಿಗೋಳಿ, ಕಟೀಲು ಮೂಡಬಿದಿರೆ, ಸಹಿತ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾನವನ್ನು ಸಂಪರ್ಕಿಸುವ ಹೆಚ್ಚಿನ ವಾಹನ ಸವಾರರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ . ಸ್ವಲ್ಪ ಎಡವಟ್ಟಾದರೂ ಅಪಘಾತ ಸಂಭವಿಸಬಹುದು. ಬೆಳ್ಮಣ್‌ನಿಂದ ಮುಂಡ್ಕೂರು ಜೈನ್‌ ಪೇಟೆಯ ವರೆಗೆ ರಸ್ತೆಯು ಇತ್ತೀಚೆಗೆ ವಿಸ್ತರಣೆಗೊಂಡು ಡಾಮರೀಕರಣಗೊಂಡಿದ್ದು ಮುಂಡ್ಕೂರು ಪೇಟೆ ಪ್ರದೇಶದಿಂದ ಪಡಿತ್ತಾರ್ ಸೇತುವೆ ಅವರಿಗೆ ಮಾತ್ರ ಇನ್ನೂ ವಿಸ್ತರಣೆ ಕಾಮಗಾರಿ ನಡೆದಿಲ್ಲ.


ಸೇತುವೆ ಸಂಪರ್ಕಿಸುವಲ್ಲಿ ರಸ್ತೆ ಸಮತಟ್ಟು ಮಾಡದ ಹಿನ್ನೆಲೆಯಲ್ಲಿ ಸೇತುವೆ ನಿರ್ಮಿಸಿದ ಜಾಗದ ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ.
ಕಾಮಗಾರಿ ನಡೆದು ಹಲವು ಸಮಯ ಕಳೆದರೂ ಸೇತುವೆಗೆ ಶಾಶ್ವತ ತಡೆಗೋಡೆ ನಿರ್ಮಾಣವಾಗಿಲ್ಲ. ಮೋರಿಯ ನಿರ್ಮಾಣ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆದಿದೆ. ಸಂಬಂಧಪಟ್ಟ ಇಲಾಖೆ ಸ್ಥಳೀಯಾಡಳಿತ ಹಾಗೂ ಗುತ್ತಿಗೆದಾರರ ನಿರ್ಲಕ್ಷ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಸೇತುವೆಯ ಬದಿಗೆ ಹಾಕಿದ ಮಣ್ಣು ಕೊಚ್ಚಿ ಹೋಗಿದ್ದು ಸ್ವಲ್ಪ ಎಡವಟ್ಟಾದರೂ ವಾಹನ ಸವಾರರು ಯಾವುದೇ ಸಮಯದಲ್ಲೂ ಅಪಘಾತ ಸಂಭವಿಸಬಹುದು. ಕಾಮಗಾರಿ ನಡೆದು ಕೆಲವು ಸಮಯ ಆದರೂ ಇನ್ನೂ ಕೂಡ ಸೇತುವೆಯ ಬದಿ ತಡೆಗೋಡೆ ನಿರ್ಮಾಣ ಸಿಲ್ಲ. ಅವೆಜ್ಞಾನಿಕ ಕಾಮಗಾರಿಯಿಂದ ಸೇತುವೆಯ ಮಧ್ಯದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದೆ.

-ಉಮೇಶ್ ಕಾಮತ್ ಸಿವಿಲ್ ಇಂಜಿನಿಯರ್ ಮುಂಡ್ಕೂರು.

RELATED ARTICLES
- Advertisment -
Google search engine

Most Popular