ಬೆಳ್ಮಣ್: ಜೆಸಿಐ ಮುಂಡ್ಕೂಡು ಭಾರ್ಗವ, ಲೇಡಿ ಜೇಸಿ ಮತ್ತು ಜೂನಿಯರ್ ಜೇಸಿ ವಿಭಾಗ ಪ್ರಾಂತ್ಯ ಎ ವಲಯ ಮತ್ತು ವಲಯ – ೧೫, ಭಾರತೀಯ ಜೆಸಿಐ ವತಿಯಿಂದ ಸೆ. 15ರಂದು ಮುಂಡ್ಕೂರು ಯು.ಕೆ. ಹೆಗ್ಡೆ ಸಭಾಭವನದಲ್ಲಿ ರಜತ ಮಹೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 9ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳ್ಮಣ್ ವಲಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3.30ರಿಂದ ಜೇಸಿ ಸಪ್ತಾಹ ಮತ್ತು ರಜತ ಮಹೋತ್ಸವ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ವಿನೂತನ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.