Tuesday, December 3, 2024
HomeUncategorizedಕಾರ್ಕಳ :ಪುರಸಭೆ ಅಧ್ಯಕ್ಷ ಯೊಗೀಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ

ಕಾರ್ಕಳ :ಪುರಸಭೆ ಅಧ್ಯಕ್ಷ ಯೊಗೀಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ

ಕಾರ್ಕಳದಲ್ಲಿ ವ್ಯವಸ್ಥಿತ ಬೀದಿ ದೀಪ ರೂಪಿಸುವ ಬಗ್ಗೆೆ ಯೋಜನೆ ರೂಪಿಸಲಾಗಿತ್ತು. ಇನ್ನೂ ಸಹ ಈ ಯೋಜನೆ ಅನುಷ್ಠಾನವಾಗದೇ ವಿಳಂಬವಾಗುತ್ತಿದೆ. ನಗರದಲ್ಲಿ ಬೀದಿನಾಯಿಗಳ ಕಾಟದಿಂದ ಜನರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಕಳದಲ್ಲಿ ಮಾಸಿದ ಫಲಕಗಳು ಪ್ರವಾಸಿಗರು, ಜನರನ್ನು ಸ್ವಾಗತಿಸುವಂತಾಗಿದೆ. ಇದು ಕಾರ್ಕಳದಂತ ಊರಿಗೆ ಕಪ್ಪು ಚುಕ್ಕೆ ಎಂದು ಸದಸ್ಯ ಅಶ್ಪಕ್ ಅಹಮ್ಮದ್ ಅಸಮಾದಾನ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಯೊಗೀಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.
ಅಧ್ಯಕ್ಷ ಯೊಗೀಶ್ ದೇವಾಡಿಗ ಅವರು ಉತ್ತರಿಸಿ ಹಂತಹಂತವಾಗಿ ಬೀದಿದೀಪ ಯೋಜನೆ ಜಾರಿಗೊಳಿಸಲಾಗುತ್ತದೆ. ಈಗಾಗಲೆ ಬೀದಿನಾಯಿಗಳಿಗೆ ಕೆಲವು ಸಂಖ್ಯೆೆಯಲ್ಲಿ ಸಂತಾನಹರಣ ಚಿಕಿತ್ಸೆೆ ಮಾಡಿದ್ದು, ಇದರ ನಿಯಂತ್ರಣಕ್ಕೆೆ ಸೂಕ್ತ ಕ್ರಮವಹಿಸಲಾಗುವುದು. ಮಾಸಿದ ಫಲಕ ಹೊಸದಾಗಿ ರೂಪಿಸಲು ಅನುದಾನದ ಕೊರತೆ ಇದೆ ಎಂದು ಅಧಿಕಾರಿಗಳು ತಿಳಿಸಿದಾದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಮೂಲವಾದ ರಾಮ ಸಮುದ್ರ ಕೆರೆಗೆ ತ್ಯಾಜ್ಯ ನೀರು ಸೇರುವ ಮೂಲಕ ಈ ಕೆರೆಯ ನೀರು ಕಲುಷಿತಗೊಳ್ಳುತ್ತಿದೆ ಎಂದು ಪುರಸಭೆ ಸದಸ್ಯ ಶುಭಧ ರಾವ್ ಆಕ್ರೋಶ ವ್ಯಕ್ತಪಡಿಸಿದರು. ಕೆರೆಗೆ ತ್ಯಾಜ್ಯ ನೀರು ಬಿಡುವರನ್ನು ಪತ್ತೆೆ ಮಾಡಿ ಸೂಕ್ತ ಕಾನೂನು ಕ್ರಮವಹಿಸಬೇಕು. ಯುಜಿಡಿ ನೀರನ್ನು ಶುಚಿಗೊಳಿಸಿ ಪರ್ಯಾಯವಾಗಿ ಯುಜಿಡಿ ಚರಂಡಿಗೆ ನೀರು ಬಿಡಬೇಕು ಒತ್ತಾಯಿಸಿದರು.
ಸದಸ್ಯರಾದ ವಿನ್ನಿ ಬೋಲ್‌ಡ್‌, ಹರೀಶ್ ಅವರು ಇದಕ್ಕೆೆ ಧ್ವನಿಗೂಡಿಸಿ ಸೂಕ್ತ ಕ್ರಮಕ್ಕೆೆ ಒತ್ತಾಾಯಿಸಿದರು. ಈ ಸಮಸ್ಯೆೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಲಾಗುವುದು. ಕೆರೆಗೆ ಕಲುಷಿತ ನೀರು ಬಿಡುತ್ತಿರುವರ ವಿರುದ್ದ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪುರಸಭೆ ಮುಖ್ಯ ಅಧಿಕಾರಿ ರೂಪಾ ಶೆಟ್ಟಿ ತಿಳಿಸಿದರು.
ಲೈಸೆನ್‌ಸ್‌ ಇಲ್ಲದೆ ಪೇಟೆಗಳಲ್ಲಿ ಅನಧಿಕೃತವಾಗಿ ಎಷ್ಟು ಅಂಗಡಿಗಳು ಕಾರ್ಯಾಚರಿಸುತ್ತಿವೆ. ನವೀಕರಣಕ್ಕೆೆ ಬಾಕಿ ಇರುವ ಅಂಗಡಿ, ಮುಂಗಟ್ಟುಗಳಿಗೆ ಸೂಕ್ತ ರೀತಿಯಲ್ಲಿ ನೋಟೀಸ್ ಕ್ರಮವಹಿಸಬೇಕು .ಅಧಿಕಾರಿಗಳು ಈ ಬಗ್ಗೆೆ ವ್ಯವಸ್ಥಿತವಾಗಿ ಕಾರ್ಯನಿರ್ವಸಬೇಕು ಎಂದು ಅಧ್ಯಕ್ಷ ಯೊಗೀಶ್ ದೇವಾಡಿಗ ಸೂಚನೆ ನೀಡಿದರು. ಲೈಸೆನ್‌ಸ್‌ ಇಲ್ಲದ ಕಾರ್ಯಾಚರಿಸುತ್ತಿರುವ 10 ಅಂಗಡಿಗಳಿಗೆ ನೊಟೀಸ್ ನೀಡಿದ್ದು, ಈ ಬಗ್ಗೆೆ ಸೂಕ್ತ ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.
ಪೇಟೆ ವ್ಯಾಪ್ತಿಯಲ್ಲಿ ಎಲ್ಲೆೆಂದರಲ್ಲಿ ಬೇಕಾಬಿಟ್ಟಿ ಬ್ಯಾಾನರ್ ಹಾಕಲು ಅವಕಾಶ ಕೊಡಬೇಡಿ. ಕೆಲವು ಅಪಘಾತಗಳು ಬ್ಯಾಾನರ್‌ಗಳಿಂದಲೂ ನಡೆಯುತ್ತಿದೆ. ತಿರುವು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಈ ಬಗ್ಗೆೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸರ್ವ ಸದಸ್ಯರು ಹೇಳಿದರು.
ಸದಸ್ಯೆೆ ಪ್ರತಿಮಾ ಅವರು 20ಕ್ಕೂ ಅಧಿಕ ಮನೆಗಳಿಗೆ ಹಕ್ಕುಪತ್ರ ಸಿಗದ ಬಗ್ಗೆೆ ಚರ್ಚಿಸಿ, ಜನನ-ಮರಣ ಪತ್ರ ತಿದ್ದುಪಡಿ ವಿಳಂಬವಾಗುತ್ತಿರುವ ಬಗ್ಗೆೆ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಿಗೆ ಖುದ್ದು ಕೆಲಸವಾಗುತ್ತಿಲ್ಲ. ಇನ್ನೂ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು. ಇದಕ್ಕೆೆ ಸದಸ್ಯ ಸೋಮನಾಥ್ ನಾಯ್‌ಕ್‌ ಅವರ ಸಹಮತ ನೀಡಿ ಅಧಿಕಾರಿಗಳನ್ನು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular