Thursday, December 5, 2024
Homeಬೆಂಗಳೂರುಬಿಜೆಪಿ ನಾಯಕರು ಎಚ್‌ಐವಿ ಪರೀಕ್ಷೆ ಮಾಡಿಕೊಂಡು ಸಹಕರಿಸಿ: ಕಾಂಗ್ರೆಸ್‌ ವ್ಯಂಗ್ಯ | ಟಾರ್ಗೆಟ್‌ ಮಾಡಿದ್ದ ನಾಯಕರ...

ಬಿಜೆಪಿ ನಾಯಕರು ಎಚ್‌ಐವಿ ಪರೀಕ್ಷೆ ಮಾಡಿಕೊಂಡು ಸಹಕರಿಸಿ: ಕಾಂಗ್ರೆಸ್‌ ವ್ಯಂಗ್ಯ | ಟಾರ್ಗೆಟ್‌ ಮಾಡಿದ್ದ ನಾಯಕರ ವಿರುದ್ಧ ಮುನಿರತ್ನಂ ʻಏಡ್ಸ್‌ ರಕ್ತʼ ಬಳಸಿದ್ದ ಗಂಭೀರ ಆರೋಪ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಪೊಲೀಸ್​ ಬಂಧನಕ್ಕೊಳಗಾಗಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳುಳ್ಳ ಒಂದೊಂದೇ ವಿಚಾರಗಳು ಈಗ ಬೆಳಕಿಗೆ ಬರುತ್ತಿದೆ. ಹೂ ಗುಚ್ಛ ನೀಡುವ ನೆಪದಲ್ಲಿ ಇಂಜೆಕ್ಟ್‌ ಮಾಡಲು ಮುನಿರತ್ನ ಅವರು ಪ್ಲ್ಯಾನ್‌ ಹಾಕಿಕೊಂಡಿದ್ದರು ಎನ್ನಲಾಗಿದೆ. ಮುನಿರತ್ನಂ ಟಾರ್ಗೆಟ್ ಮಾಡಿದ್ದ ನಾಯಕರನ್ನು ‘ಏಡ್ಸ್ ರಕ್ತ’ ಬಳಸಿ ಎಚ್‌ಐವಿ ಹಬ್ಬಿಸಲು ಪ್ರಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ಪಕ್ಷದ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್ ನಿಯಂತ್ರಣದ ಅಭಿಯಾನಕ್ಕೆ ಸಹಕರಿಸಬೇಕು ಎಂದು ವ್ಯಂಗ್ಯವಾಡಿದೆ.
ʻʻಮುನಿರತ್ನರ ದ್ವೇಷದ ರಾಜಕೀಯಕ್ಕೆ, ಭ್ರಷ್ಟಾಚಾರಕ್ಕೆ ಗುರಿಯಾದವರಲ್ಲಿ ಬಿಜೆಪಿ ನಾಯಕರೂ ಹೊರತಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸ್ವತಃ ಬಿಜೆಪಿ ನಾಯಕ ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಅಘಾತಕಾರಿ ಸಂಗತಿ ಹೊರಬಂದಿದೆ. ಇಂತಹ ವಿಕೃತರತ್ನನನ್ನು ತಲೆ ಮೇಲೆ ಹೊತ್ತು ಮೆರೆಸುವ ಬಿಜೆಪಿ ಪಕ್ಷದ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್ ನಿಯಂತ್ರಣದ ಅಭಿಯಾನಕ್ಕೆ ಸಹಕರಿಸಬೇಕುʼʼ ಎಂದು ಕಾಂಗ್ರೆಸ್​​ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿದ್ದು, ದುರುದ್ದೇಶಪೂರ್ವಕವಾಗಿ ಏಡ್ಸ್ ಪೀಡಿತ ಮಹಿಳೆಯರನ್ನು ಬಿಟ್ಟು ಧಂದೆ ಮಾಡಿದ್ದು ದುರಂತ. ಅಧಿಕಾರಿಗಳು, ರಾಜಕಾರಣಿಗಳು ಅವರ ಅಧಿಕಾರ ದುರುಪಯೋಗ ಕಂಡು ಬಂದಿದೆ. ಮುನಿರತ್ನ ಭ್ರಷ್ಟಚಾರಿ ಅನ್ನೊದು ಗೊತ್ತಿತ್ತು. ಆದರೆ ವಿಕೃತ ಮನಸ್ಸಿನ ಸೆಕ್ಸ್ ರಾಕೆಟ್​ ನಡೆಸ್ತಾನೆ ಎಂದು ಈಗ ಗೊತ್ತಾಯಿತು. ಪೊಲೀಸ್ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ದುರ್ಬಳಕೆ ಆಗಿದೆ. ಹನಿಟ್ರ್ಯಾಪ್ ಗೆ ಒಳಗಾದವರಿಗೆ ಬ್ಲಾಕ್ ಮೇಲ್ ಮಾಡಿ ಅವರ ಮೂಲಕ ಟ್ರ್ಯಾಪ್ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.
ಮುನಿರತ್ನಂ ನಾಯ್ಡು ವಿರುದ್ಧದ ಏಡ್ಸ್ ರಕ್ತದ ಆರೋಪ ಕೇಳಿಬಂದ ನಂತರ ಸಂಚಲನವೇ ಸೃಷ್ಟಿಸಿದೆ. ಅದರಲ್ಲೂ ಬಿಜೆಪಿ ನಾಯಕರಲ್ಲಿ ಆತಂಕ ಮನೆ ಮಾಡಿದೆ. ಮುನಿರತ್ನಂ ‘ಏಡ್ಸ್ ರಕ್ತ’ ಬಳಸಲು ಮುಂದಾಗಿದ್ದರು ಎನ್ನುವ ಆರೋಪದ ಸತ್ಯಾಸತ್ಯತೆ ಗೊತ್ತಿಲ್ಲ. ಆದರೆ ಈ ಬಗ್ಗೆ ಸೂಕ್ತ ತನಿಖೆಯಿಂದ ತಿಳಿದುಬರಬೇಕಿದೆ.

RELATED ARTICLES
- Advertisment -
Google search engine

Most Popular