ಅಂತಾರಾಷ್ಟ್ರೀಯ ಸಂಸ್ಥೆ ಲಯನ್ಸ್ ಕ್ಲಬ್ ಸೇವೆಗೆ ಮೀಸಲು : ಜೀತೇಂದ್ರ ಪುಟಾರ್ಡೋ
ಮುನಿಯಾಲು : ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಸೇವಾ ಸಂಸ್ಥೆ. ಸೇವೆ ಮಾತ್ರ ಮೀಸಲಾದ ಸಂಸ್ಥೆ ಲಯನ್ಸ್ ಗೆ ವಿಶ್ವದಲ್ಲೇ ವಿಶೇಷ ಮನ್ನಣೆ ಇದೆ, ಸೇವೆಯ ಜೊತೆಗೆ ಲಯನ್ಸ್ ಸಂಸ್ಥೆಯ ಮೂಲಕ ನಾಯಕತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಲಯನ್ಸ್ ಪ್ರಾಂತೀಯ ಪೂರ್ವಾಧ್ಯಕ್ಷ ಜೀತೇಂದ್ರ ಪುಟಾರ್ಡೋ ಹೇಳಿದರು.ಅವರು ಮುನಿಯಾಲು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಟಿ.ಭುಜಂಗ ಶೆಟ್ಟಿ ಮತ್ತವರ ತಂಡದ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಲಯನ್ಸ್ ಜಿಲ್ಲೆಯ ಪ್ರತಿಷ್ಠಿತ ಲಯನ್ಸ್ ಕ್ಲಬ್ ಸೇವೆ ಎಲ್ಲರಿಗೂ ಮಾದರಿ ಎಂದು ಜೀತೇಂದ್ರ ಪುಟಾರ್ಡೋ ಮೆಚ್ಚುಗೆ ವ್ಯಕ್ತಪಡಿಸಿದರು. ಮುನಿಯಾಲು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಕಾಡುಹೊಳೆಯ ಮಂಜುನಾಥ್ ಸೇವಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ಟಿ.ಭುಜಂಗ ಶೆಟ್ಟಿ ಪದಗ್ರಹಣ ಸ್ವೀಕರಿಸಿ ಮಾತನಾಡಿ ಲಯನ್ಸ್ ಮೂಲಕ ಜನಸೇವೆ ಮಾಡಲು ಅವಕಾಶ ಕಲ್ಪಿಸಿದ ಪ್ರಮುಖರಿಗೆ ಅಭಿನಂದನೆ ಸಲ್ಲಿಸಿದರು.
ಮುನಿಯಾಲು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಕಾಡುಹೊಳೆಯ ಮಂಜುನಾಥ್ ದಂಪತಿ, ಲಯನ್ಸ್ ಪ್ರಾಂತೀಯ ಪೂರ್ವಾಧ್ಯಕ್ಷ ಜೀತೇಂದ್ರ ಪುಟಾರ್ಡೋ ದಂಪತಿ ಹಾಗೂ ವೈದ್ಯರ ದಿನದ ಪ್ರಯುಕ್ತ ವರಂಗದ ಡಾ.ವಸಂತ್ ಅವರನ್ನು ಸನ್ಮಾನಿಸಲಾಯಿತು. ಹಲವರಿಗೆ ಸೇವಾ ಕಾರ್ಯ, ಶೈಕ್ಷಣಿಕ ಮತ್ತು ಆರೋಗ್ಯ ನೆರವು ನೀಡಲಾಯಿತು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಪ್ರಾಂತೀಯ ಕಾರ್ಯದರ್ಶಿ ಥೋಮಸ್ ಲೂಕಾಸ್ ಅಜೆಕಾರು ಮಾತನಾಡಿದರು. ಲಿಯೋ ಕ್ಲಬ್ ಶರಣ್ಯ ಭಟ್, ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷ ಸಂದೇಶ ಶೆಟ್ಟಿ, ಕೋಶಾಧಿಕಾರಿ ಅಶೋಕ ಎಂ.ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಶೆಟ್ಟಿ, ನಿರ್ದೇಶಕರಾದ ಸೀತಾರಾಮ ಕಡಂಬ, ಡಾ.ಕೆ.ಸುದರ್ಶನ್ ಹೆಬ್ಬಾರ್, ಡಾ.ಪ್ರಮೋದ್ ಕುಮಾರ್ ಹೆಗ್ಡೆ, ಚಿರಂಜಿತ್ ಅಜಿಲ, ಸುಜಯ ಶೆಟ್ಟಿ, ಹರ್ಷ ಶೆಟ್ಟಿ, ವಿವಿಧ ಪ್ರಮುಖರಾದ ಸಂಪತ್ ಕುಮಾರ್, ಅಶೋಕ್ ಕುಮಾರ್ ದೊಂಡೆರಂಗಡಿ ಸಹಿತ ಮುನಿಯಾಲು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಂಕರ ಶೆಟ್ಟಿ ಮುನಿಯಾಲು ನಿರೂಪಿಸಿ ಮುನಿಯಾಲು ಗೋಪಿನಾಥ ಭಟ್ ವಂದಿಸಿದರು.