Saturday, July 20, 2024
Homeಅಪರಾಧಪೋಷಕರ ಮತ್ತು ಸಹೋದರಿಯ ಹತ್ಯೆ: ವಾರದ ಕಾಲ ರಕ್ತಸಿಕ್ತ ದೇಹಗಳೊಂದಿಗೆ ಜೀವಿಸಿದ ಬಾಲಕ

ಪೋಷಕರ ಮತ್ತು ಸಹೋದರಿಯ ಹತ್ಯೆ: ವಾರದ ಕಾಲ ರಕ್ತಸಿಕ್ತ ದೇಹಗಳೊಂದಿಗೆ ಜೀವಿಸಿದ ಬಾಲಕ

ತನ್ನ ಕೈಯಿಂದ ಫೋನ್​ ಕಸಿದುಕೊಂಡಿದ್ದಕ್ಕಾಗಿ ಪೋಷಕರು ಹಾಗೂ ಅಕ್ಕನನ್ನು ಗುಂಡಿಕ್ಕಿ ಹತ್ಯೆ ಮಾಡಿ ವಾರಗಳ ಕಾಲ ಮೃತದೇಹಗಳ ಜತೆ ಬಾಲಕನೊಬ್ಬ ಕಾಲ ಕಳೆದಿರುವ ಘಟನೆ ಸಾವೊ ಪಾಲೊದಲ್ಲಿ ನಡೆದಿದೆ. ಸೋಮವಾರ ಬಾಲಕನೇ ಪೊಲೀಸರಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡಿದ್ದಾನೆ. ಮಕ್ಕಳಿಬ್ಬರು ಮೊಬೈಲ್​ಗಾಗಿ ಜಗಳವಾಡುತ್ತಿದ್ದರು ಆಗ ಪೋಷಕರು ಮೊಬೈಲ್​ನ್ನು ಕಿತ್ತುಕೊಂಡಿದ್ದಕ್ಕೆ ಕೋಪಗೊಂಡ ಬಾಲಕ ಪೋಷಕರು ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದ.

ಮುನ್ಸಿಪಲ್ ಪೊಲೀಸ್​ ಆಗಿದ್ದ ತಂದೆಯ ಸರ್ವೀಸ್​ ಗನ್​ ಹಿಡಿದು ಮನಬಂದಂತೆ ಗುಂಡು ಹಾರಿಸಿದ್ದಾಗಿ ಆತನೇ ತಿಳಿಸಿದ್ದಾನೆ. ಸಹೋದರಿಯ ಮುಖಕ್ಕೂ ಗುಂಡು ಹಾರಿಸಿದ್ದಾನೆ, ಹಲವು ಗಂಟೆಗಳ ಬಳಿಕ ತಾಯಿ ಮನೆಗೆ ಬಂದಾಗ ಅದೇ ರಿವಾಲ್ವರ್​ನಿಂದ ಆಕೆಯನ್ನೂ ಕೊಂದಿದ್ದಾನೆ.

ಆತನಿಗೆ ಮಾನಸಿಕ ಸಮಸ್ಯೆ ಏನಾದರೂ ಇತ್ತೇ ಎಂಬುದನ್ನು ಕಂಡುಹಿಡಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಯಾರೊಂದಿಗಾದರೂ ಮಾತನಾಡಿದ್ದಾನೆಯೇ ಯಾರಾದರೂ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಕಂಡುಹಿಡಿಯಬೇಕಿದೆ.

ಆತ ಒಂದು ವಾರದವರೆಗೆ ರಕ್ತಸಿಕ್ತ ದೇಹಗಳ ಜತೆಗೆ ಮನೆಯಲ್ಲೇ ಇದ್ದ. ತಾಯಿಯ ಶವವನ್ನು ಚಾಕುವಿನಿಂದ ಇರಿದಿದ್ದಾನೆ. ಆತನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.

RELATED ARTICLES
- Advertisment -
Google search engine

Most Popular