Thursday, May 1, 2025
Homeರಾಷ್ಟ್ರೀಯನರ್ಸ್ ಆಗಿದ್ದ ಯುವತಿಯ ಹತ್ಯೆ: ಓರ್ವನ ಬಂಧನ, ಮತ್ತಿಬ್ಬರಿಗಾಗಿ ಪೋಲಿಸರ ಕಾರ್ಯಚರಣೆ

ನರ್ಸ್ ಆಗಿದ್ದ ಯುವತಿಯ ಹತ್ಯೆ: ಓರ್ವನ ಬಂಧನ, ಮತ್ತಿಬ್ಬರಿಗಾಗಿ ಪೋಲಿಸರ ಕಾರ್ಯಚರಣೆ

ಹಾವೇರಿ: ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಹತ್ಯೆಯಾಗಿದ್ದು, ಪ್ರಕರಣ ಸಂಬಂಧ ಓರ್ವನನ್ನು ಹಲಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಬಂಧಿತನನ್ನು ನಯಾಜ್ ಎಂದು ಗುರುತಿಸಲಾಗಿದೆ.

ಮಾರ್ಚ್ 6 ರಂದು ಯುವತಿಯ ಮೃತದೇಹ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಮೊದಲು ಅಪರಿಚಿತ ಯುವತಿಯ ಶವ ಎಂದು ಹಲಗೇರಿ ಪೊಲೀಸರು ಘೋಷಿಸಿದ್ದರು. ಬಳಿಕ ವಾರಸುದಾರರು ಯಾರೂ ಇಲ್ಲದ ಹಿನ್ನೆಲೆ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಅಂತ್ಯಕ್ರಿಯೆ ನಡೆಸಿದ್ದರು.

ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢಪಟ್ಟಿದೆ. ಬಳಿಕ ತನಿಖೆ ತೀವ್ರಗೊಳಿಸಿದ ಹಲಗೇರಿ ಪೊಲೀಸರು, ಮಾರ್ಚ್ 3 ರಂದು ಕಾಣೆಯಾಗಿದ್ದ ಯುವತಿಯ ಗುರುತನ್ನು ಪತ್ತೆಹಚ್ಚಿದ್ದರು. ಇನ್ನೂ ಸ್ವಾತಿ ಪೋಷಕರು, ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಆಕೆ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

ಯುವತಿ ಸ್ವಾತಿಯನ್ನು ಮೂವರು ಹತ್ಯೆಗೈದಿದ್ದಾರೆ ಎನ್ನಲಾಗಿದ್ದು, ಪ್ರಕರಣ ಸಂಬಂಧ ಆರೋಪಿ ನಯಾಜ್ ನನ್ನು ಪೊಲೀಸರು ಬಂಧಿಸಿದ್ದು ಮತ್ತಿಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular