Thursday, December 5, 2024
Homeರಾಷ್ಟ್ರೀಯಹೆಸರು ಬದಲಿಸಿ ಹಿಂದು ಹುಡುಗಿಗೆ ಬಲೆ ಬೀಸಿದ ಮುಸ್ಲಿಂ ಯುವಕ..!

ಹೆಸರು ಬದಲಿಸಿ ಹಿಂದು ಹುಡುಗಿಗೆ ಬಲೆ ಬೀಸಿದ ಮುಸ್ಲಿಂ ಯುವಕ..!

ದೆಹಲಿ: ಸಾಮಾಜಿಕ ಜಾಲತಾಣ ಒಳ್ಳೆಯದೊ ಅಷ್ಟೇ ಕೆಟ್ಟದು ಎನ್ನುವುದರಲ್ಲಿ ಎರಡು ಮಾತಿಲ್ಲ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಂತಹ ಅಪ್ಲಿಕೇಶನ್​ಗಳನ್ನು ಬಳಸುವುದರಿಂದ ಕೆಲವೊಮ್ಮೆ ತೊಂದರೆಗಳು ಸಹ ಎದುರಾಗುತ್ತಿವೆ. ಅದರಲ್ಲೂ ರೀಲ್ಸ್​ ಮೂಲಕ ಅನೇಕರು ಫೇಮಸ್ ಆಗುತ್ತಿದ್ದಾರೆ.

ಅಲ್ಲದೆ, ಇತರರ ಪರಿಚಯ ಬೆಳೆಸಿಕೊಂಡು ಕೆಲವರು ವಂಚನೆ ಸಹ ಮಾಡುತ್ತಿದ್ದಾರೆ. ಪ್ರೀತಿಯಿಂದ ಮಾತನಾಡುತ್ತಾ, ಹರಟೆ ಹೊಡೆಯುತ್ತಾ ನಂಬಿಸಿ, ದ್ರೋಹ ಮಾಡುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಕಣ್ಣೀರು ಸಹ ಹಾಕಿವೆ. ಇದೀಗ ಲವ್ ಜಿಹಾದ್​ ಪ್ರಕರಣವೊಂದು ಇನ್​ಸ್ಟಾಗ್ರಾಂನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲವ್ ಜಿಹಾದ್​ ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೊಬ್ಬ ಹಿಂದು ಯುವತಿಯನ್ನು ಇನ್​ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು, ಸ್ನೇಹ ಬೆಳೆಸಿಕೊಂಡು ಕಿರುಕುಳ ನೀಡಿದ್ದು, ಕೊನೆಗೆ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ದೆಹಲಿ ಮೂಲದ ಸದ್ದಾಂ ಅನ್ಸಾರಿ ಎಂಬ ಮುಸ್ಲಿಂ ಯುವಕ ಇನ್​ಸ್ಟಾದಲ್ಲಿ ಹಿಂದು ಹೆಸರಿನಲ್ಲಿ ಹುಡುಗಿ ಜತೆ ಚಾಟ್​ ಮಾಡುತ್ತಿದ್ದನು. 17 ವರ್ಷದ ಹಿಂದು ಹುಡುಗಿಯನ್ನು ಬಲೆಗೆ ಬೀಳಿಸಿದ್ದನು. ಆರಂಭದಲ್ಲಿ ನಯವಾಗಿ ಚಾಟ್​ ಮಾಡುತ್ತಿದ್ದ ಸದ್ದಾಂ, ನಂತರದಲ್ಲಿ ಇನ್​ಸ್ಟಾಗ್ರಾಂನಲ್ಲೇ ತೊಂದರೆ ನೀಡಲು ಶುರು ಮಾಡಿದನು. ಬಳಿಕ ಶಾಲೆಯಿಂದ ಬರುವಾಗಲೂ ಆ ಹುಡುಗಿಗೆ ಕಿರುಕುಳ ನೀಡುತ್ತಿದ್ದನು.

ಎಚ್ಚರಿಕೆ ನೀಡಿದರೂ ಕಿರುಕುಳ ಮುಂದುವರಿಸಿದ್ದರಿಂದ ಬೇಸತ್ತ ಹುಡುಗಿ ಪೊಲೀಸರ ಮೊರೆ ಹೋಗಿದ್ದಳು. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹುಡುಗಿಗೆ ಸದ್ದಾಂ ಅನ್ಸಾರಿ ಕಿರುಕುಳ ನೀಡುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ವಶಕ್ಕೆ ಪಡೆದ ನಂತರ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲವ್ ಜಿಹಾದ್ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸುವ ಪುಂಡ ಪೋಕರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ನಕಲಿ ಗುರುತುಗಳಿಗೆ ಮರುಳಾಗಬೇಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಅನುಮಾನ ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular