ಬಪ್ಪನಾಡು ಕಿನ್ನಿಗೋಳಿ ನಡುಗೋಡು ಸರಕಾರಿ ಪ್ರೌಢಶಾಲೆ ಇಲ್ಲಿಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಎರಡು ಗಣಕಯಂತ್ರಗಳ ಕೊಡುಗೆ ನೀಡಲಾಯಿತು ಈ ಸಂದರ್ಭ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ್ಯ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಆಂಗ್ಲ ಮಾಧ್ಯಮ ಶಾಲೆಗಲೊಂದಿಗೆ ಪೈಪೋಟಿ ನೀಡಲು ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಅತಿ ಅಗತ್ಯ ಈ ನಿಟ್ಟಿನಲ್ಲಿ ನಮ್ಮ ಲಯನ್ಸ್ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಎರಡು ಗಣಕಯಂತ್ರಗಳನ್ನು ಸಹ ಶಿಕ್ಷಕ ಸಂಘದ ಅಧ್ಯಕ್ಷರಾದ ಕುಡುಪು ವಾಸುದೇವರಾವ್ ರವರ ಮನವಿಯಂತೆ ನಡುಗೋಡು ಸರಕಾರಿ ಶಾಲೆಗೆ ನೀಡಿದ್ದು ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಮುಂದಿನ ದಿನಗಳಲ್ಲಿ ಉದ್ಯೋಗ ಅಥವಾ ಉದ್ಯಮಿ ಯಾದಲ್ಲಿ ತಮ್ಮ ಸಂಪತ್ತಿನ ಒಂದು ಭಾಗವನ್ನು ಸರಕಾರಿ ಶಾಲೆಗಳಿಗೆ ಹಾಗೂ ಸಮಾಜದ ಬಡ ಜನರಿಗೆ ನೀಡಬೇಕಾಗಿ ಕರೆ ನೀಡಿದರು ಈ ಸಂದರ್ಭ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷ ರಾದ ಶಿವಪ್ರಸಾದ್, ಸ್ಥಾಪಕ ಅಧ್ಯಕ್ಷರು ಹಾಗೂ ಪ್ರಾಂತ್ಯ ಅಧ್ಯಕ್ಷರು ಪ್ರಾಂತ್ಯ 11 ಲಯನ್ ವೆಂಕಟೇಶ್ ಹೆಬ್ಬಾರ್, ಕಾರ್ಯದರ್ಶಿ ಲಯನ್ ಪ್ರತಿಭಾ ಹೆಬ್ಬಾರ್, ಲಯನ್ ಭಾಸ್ಕರ್ ಕಾಂಚನ್,ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಆಚಾರ್ಯ ಸಹಶಿಕ್ಷಕರ ಸಂಘ ಅಧ್ಯಕ್ಷ ವಾಸುದೇವ ರಾವ್, ಉಪಾಧ್ಯಕ್ಷ ಶ್ರೀ ರಾಜಶೇಖರ ಖಜಾಂಚಿ ಆಲ್ವಿನ್ ಮುಖ್ಯ ಶಿಕ್ಷಕಿ ಶ್ರೀಮತಿ ಶಾಂತಿ ಭಟ್ ಮುಂತಾದವರು ಉಪಸ್ಥಿತರಿದ್ದರು.
ನಡುಗೋಡು ಸರಕಾರಿ ಪ್ರೌಢಶಾಲೆ ಇಲ್ಲಿಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಎರಡು ಗಣಕಯಂತ್ರಗಳ ಕೊಡುಗೆ
RELATED ARTICLES