ಬಪ್ಪನಾಡು ಕಿನ್ನಿಗೋಳಿ ನಡುಗೋಡು ಸರಕಾರಿ ಪ್ರೌಢಶಾಲೆ ಇಲ್ಲಿಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಫಳ ಭರಿತ ಹಣ್ಣುಗಳ ಗಿಡಗಳನ್ನು ನೀಡಲಾಯಿತು .ಈ ಸಂದರ್ಭ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷ ರಾದ ಶಿವಪ್ರಸಾದ್, ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ವರ್ಷವಿಡಿ ಅದನ್ನು ಮಕ್ಕಳಂತೆ ಪೋಷಿಸಿ ಬರುವ ವರ್ಷ ಅತ್ಯುತ್ತಮ ಬೆಳೆದ ಗಿಡಗಳಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು ಈ ಸಂದರ್ಭ
ಸ್ಥಾಪಕ ಅಧ್ಯಕ್ಷರು ಹಾಗೂ ಪ್ರಾಂತ್ಯ ಅಧ್ಯಕ್ಷರು ಪ್ರಾಂತ್ಯ 11 ಲಯನ್ ವೆಂಕಟೇಶ್ ಹೆಬ್ಬಾರ್, ಕಾರ್ಯದರ್ಶಿ ಲಯನ್ ಪ್ರತಿಭಾ ಹೆಬ್ಬಾರ್, ಲಯನ್ ಭಾಸ್ಕರ್ ಕಾಂಚನ್,ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಆಚಾರ್ಯ ಸಹಶಿಕ್ಷಕರ ಸಂಘ ಅಧ್ಯಕ್ಷ ವಾಸುದೇವ ರಾವ್, ಉಪಾಧ್ಯಕ್ಷ ಶ್ರೀ ರಾಜಶೇಖರ ಖಜಾಂಚಿ ಆಲ್ವಿನ್ ಮುಖ್ಯ ಶಿಕ್ಷಕಿ ಶ್ರೀಮತಿ ಶಾಂತಿ ಭಟ್ ಮುಂತಾದವರು ಉಪಸ್ಥಿತರಿದ್ದರು.