Friday, March 21, 2025
Homeಬೆಂಗಳೂರುನಾಗಮಂಗಲ ಗಲಭೆ | ಪ್ರೀತಿಯ ಅಂಗಡಿಯಲ್ಲಿ ಕೇವಲ ಹಿಂದೂ ದ್ವೇಷದ ಮಾರಾಟ: ಬಿಜೆಪಿ ವಾಗ್ದಾಳಿ; ಕಲ್ಲೆಸೆತದ...

ನಾಗಮಂಗಲ ಗಲಭೆ | ಪ್ರೀತಿಯ ಅಂಗಡಿಯಲ್ಲಿ ಕೇವಲ ಹಿಂದೂ ದ್ವೇಷದ ಮಾರಾಟ: ಬಿಜೆಪಿ ವಾಗ್ದಾಳಿ; ಕಲ್ಲೆಸೆತದ ವಿಡಿಯೋ ಶೇರ್

ಬೆಂಗಳೂರು: ಗಣಪತಿ ಶೋಭಾಯಾತ್ರೆ ವೇಳೆ ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಘಟನೆಯನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರೀತಿಯ ಅಂಗಡಿಯಲ್ಲಿ ಹಿಂದೂ ದ್ವೇಷವನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಕಿಡಿಕಾರಿದೆ. ಅಲ್ಲದೆ, ನಾಗಮಂಗಲದಲ್ಲಿ ನಡೆದಿದೆ ಎನ್ನಲಾದ ಕಲ್ಲು ತೂರಾಟದ ವಿಡಿಯೋಗಳನ್ನು ತನ್ನ ಎಕ್ಸ್‌ ಖಾತೆಯಲ್ಲಿ ಬಿಜೆಪಿ ಶೇರ್‌ ಮಾಡಿಕೊಂಡಿದೆ.
ಮೂಲಗಳ ಪ್ರಕಾರ, ದರ್ಗಾದ ಎದುರು ಗಣೇಶ ಶೋಭಾಯಾತ್ರೆ ತೆರಳುತ್ತಿದೆ ಎನ್ನುವ ಕಾರಣಕ್ಕಾಗಿ ಚಪ್ಪಲಿ, ಕಲ್ಲುಗಳನ್ನು ಎಸೆಯಲಾಗಿದೆ. ವಾಹನಗಳಿಗೆ, ಸಣ್ಣ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ. ಹಗರಣಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ನಾಯಕ ಬಾಲಕ ಬುದ್ಧಿಯ ರಾಹುಲ್‌ ಗಾಂಧಿಯವರು ಕರ್ನಾಟಕದಲ್ಲಿ ತೆರೆದಿರುವ ಪ್ರೀತಿಯ ಅಂಗಡಿಯಲ್ಲಿ ಕೇವಲ ಹಿಂದೂಗಳ ವಿರುದ್ಧದ ದ್ವೇಷವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ. ಹಿಂದೂ ವಿರೋಧಿ ಗಲಭೆಯನ್ನು ಅಸಮರ್ಥ ಗೃಹ ಸಚಿವ ಸಣ್ಣ ಘಟನೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದೂ ಬಿಜೆಪಿ ಟೀಕೆ ಮಾಡಿದೆ.


ವಿಡಿಯೊ ವೀಕ್ಷಿಸಲು ಲಿಂಕ್‌ ಕ್ಲಿಕ್‌ ಮಾಡಿ…


https://x.com/BJP4Karnataka/status/1834106391226692034?ref_src=twsrc%5Etfw%7Ctwcamp%5Etweetembed%7Ctwterm%5E1834106391226692034%7Ctwgr%5E37219d3c93e7977f51fd5e4d1aac5b3a0f4d2b56%7Ctwcon%5Es1_&ref_url=https%3A%2F%2Fwww.prajavani.net%2Fnews%2Fkarnataka-news%2Fnagamangala-riots-congress-only-sells-hate-for-hindus-in-mohabbat-ki-dukhan-slams-bjp-2963989

RELATED ARTICLES
- Advertisment -
Google search engine

Most Popular