Tuesday, December 3, 2024
HomeUncategorizedನಾಗಮಂಗಲ ಗಲಭೆ ಎನ್.ಐ. ಎ. ತನಿಖೆಗೆ ವಹಿಸಿ : ಯಶ್ ಪಾಲ್ ಸುವರ್ಣ ಆಗ್ರಹ

ನಾಗಮಂಗಲ ಗಲಭೆ ಎನ್.ಐ. ಎ. ತನಿಖೆಗೆ ವಹಿಸಿ : ಯಶ್ ಪಾಲ್ ಸುವರ್ಣ ಆಗ್ರಹ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮತಾಂಧ ಮುಸ್ಲಿಂ ಮತೀಯವಾದಿಗಳು ಪೆಟ್ರೋಲ್ ಬಾಂಬ್, ಕಲ್ಲುತೂರಾಟ ನಡೆಸಿ ಹಿಂಸಾಚಾರ ಅಶಾಂತಿ ಸೃಷ್ಟಿಸಿದ ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ರಾಷ್ಟೀಯ ತನಿಖಾ ದಳಕ್ಕೆ ವಹಿಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ ಮಾಡಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ನಾಗಮಂಗಲ ಘಟನೆ ಜ್ವಲಂತ ನಿದರ್ಶನವಾಗಿದ್ದು, ಕಾಂಗ್ರೆಸ್ ಸರಕಾರದ ಮುಸ್ಲಿಂ ಓಲೈಕೆಯಿಂದ ಜಿಹಾದಿ ಮಾನಸಿಕತೆಯ ಶಕ್ತಿಗಳು ಸಮಾಜಘಾತುಕ ಕೃತ್ಯಗಳನ್ನು ರಾಜಾರೋಷವಾಗಿ ನಡೆಸುತ್ತಿವೆ.

ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿ ಸಂಚಾರಕ್ಕೆ ತಡೆ ಮಾಡುವ ಮತೀಯವಾದಿಗಳು, ಗಣೇಶ ವಿಸರ್ಜನಾ ಮೆರವಣಿಗೆ ತಮ್ಮ ಮಸೀದಿಯ ಬಳಿ ಸಾಗಲು ತಡೆ ಒಡ್ಡಿ ಪೂರ್ವಯೋಜಿತವಾಗಿ ಪೆಟ್ರೋಲ್ ಬಾಂಬ್, ಕಲ್ಲು ತೂರಾಟ ನಡೆಸಿ ಬಹುಸಂಖ್ಯಾತ ಹಿಂದೂ ಸಮುದಾಯವನ್ನು ಕೆಣಕುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಗಲಭೆ ಕೋರರನ್ನು ತಕ್ಷಣ ಬಂಧಿಸಿ, ಈ ಭಯೋತ್ಪಾದಕ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ರಾಮೇಶ್ವರಂ ಬಾಂಬ್ ಬ್ಲಾಸ್ಟ್, ಬಿಜೆಪಿ ಕಛೇರಿ ಸ್ಫೋಟಿಸಲು ಉದ್ದೇಶಿಸಿದ್ದ ಉಗ್ರ ಚಟುವಟಿಕೆಯ ಹಿನ್ನಲೆಯಲ್ಲಿ ಉನ್ನತ ಮಟ್ಟದ ತನಿಖೆಗಾಗಿ ಎನ್ ಐ ಎ ಗೆ ವಹಿಸುವಂತೆ ಯಶ್ ಪಾಲ್ ಸುವರ್ಣ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular