ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್ (ರಿ),ಇದರ ಸುವರ್ಣ ಸಂಭ್ರಮ ಕಾರ್ಯಕ್ರಮ ವು ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠಾದೀಶ ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ
ದಿವ್ಯ ಉಪಸ್ಥಿತಿಯಲ್ಲಿ 2024 ನವಂಬರ್ 28 ಗುರುವಾರದಿಂದ ಡಿಸೆಂಬರ್ 01 ಆದಿತ್ಯವಾರದ ವರೆಗೆ* ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು
ಪೂಜ್ಯ ಸ್ವಾಮೀಜಿಯವರ ಶುಭಾಗಮನ,ಪೂರ್ಣಕುಂಭ ಸ್ವಾಗತ ಗುರುಪಾದ್ಯ ಪೂಜೆ ಆಶೀರ್ವಚನ ಮಂಗಳಾರತಿ ಸಂತರ್ಪಣೆ (ಭಜನಾ ಸಮಾರಾಧನೆ) ಸಂಜೆ ಕಾರ್ತಿಕ ಭಜನಾ ಮಂಗಲೋತ್ಸವದ ಪಲ್ಲಕ್ಕಿ ಉತ್ಸವ,ರಾತ್ರಿ 8.00 ಕ್ಕೆ ರಾತ್ರಿ ಪೂಜೆ, ಮಂಗಳಾರತಿ,ಪ್ರಸಾದ ವಿತರಣೆ,ಸಮಾರಾಧನೆ ನಡೆಯಿತು
ನವಂಬರ್ 29 ಶುಕ್ರವಾರ*
ಶ್ರೀ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಶತಕಲಶಾಭಿಷೇಕ,
ಸಾನಿಧ್ಯ ಹವನ ಪೂರ್ಣಾಹುತಿ, ಮಹಾಪೂಜೆ, ಮಹಾ ಮಂಗಳಾರತಿ, ಪಟ್ಟಕಾಣಿಕೆ ಸಮರ್ಪಣೆ,ಯತಿ-ಬ್ರಾಹ್ಮಣ ಸಮಾರಾಧನೆ,ಸಂತರ್ಪಣೆ.ಸಂಜೆ 5.30 ಕ್ಕೆ ಸುವರ್ಣ ಮಹೋತ್ಸಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ,ರಾತ್ರಿಪೂಜೆ, ಪ್ರಸಾದವಿತರಣೆ ಬಳಿಕ ಸಮಾರಾಧನೆ ನಡೆಯಿತು
ನವಂಬರ್ 30 ಶನಿವಾರ ಶ್ರೀ ಲಘು ವಿಷ್ಣು ಹವನ,ಶ್ರೀ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಪೂರ್ಣಾಹುತಿ,ಮಹಾ ಪೂಜೆ,ಸಂತರ್ಪಣೆ,ಸಂಜೆ ಸಂತರ್ಪಣೆ,ಧಾರ್ಮಿಕ ಸಭೆ,
ಫಲಮಂತ್ರಾಕ್ಷತೆ,ರಾತ್ರಿಪೂಜೆ,ಸಮಾರಾಧನೆ ನಡೆಯಿತು.
ಡಿಸೆಂಬರ್ 01 ಆದಿತ್ಯವಾರ*
ಶ್ರೀ ಸತ್ಯನಾರಾಯಣ ಪೂಜೆ,ತಪ್ತ ಮುದ್ರಾಧಾರಣೆ,ಮಹಾಪೂಜೆ, ಸಂತರ್ಪಣೆ,ಪಾದ್ಯಪೂಜೆ,ಫಲಮಂತ್ರಾಕ್ಷತೆ.ಮದ್ಯಾಹ್ನ 2.00 ಗಂಟೆಗೆ ಶ್ರೀ ಗುರುವರ್ಯರನ್ನು ಮುಂದಿನ ಮೊಕ್ಕಾಮಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು
ಪ್ರತಿದಿನ ಮಹಾ ಅನ್ನಸಂತರ್ಪಣೆ ಸಾನಿಧ್ಯದಲ್ಲಿ ,ಸಂಪನ್ನಗೊಂಡಿತು
ಈ ಸಂದರ್ಭದಲ್ಲಿ ಅಧ್ಯಕ್ಷರು ಸದಸ್ಯರು ಮತ್ತು ಪದಾಧಿಕಾರಿಗಳು,ಶ್ರೀ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್, ಶ್ರೀ ವರಮಹಾಲಕ್ಷ್ಮಿ ವ್ರತ ಸೇವ ಸಮಿತಿ, ಅರ್ಚಕ ವೃಂದದವರು ಮತ್ತು ಜಿಎಸ್‌ಬಿ ಗೆಳೆಯ ಬಳಗ ಶ್ರೀ ವೆಂಕಟರಮಣ ದೇವಸ್ಥಾನ ನಾಯ್ಕನ್ ಕಟ್ಟೆ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.