Saturday, November 2, 2024
Homeರಾಜ್ಯಮಾ.9 ರಂದು ನಲ್ಲೂರು ಲಕ್ಷ್ಮಣರಾವ್ ರೇವಣಕರ್ ವಿರಚಿತ ಸುಭಾಷಿತ ಸಂಗ್ರಹಗಳ ಹೊತ್ತಿಗೆಗಳ ಲೋಕಾರ್ಪಣೆ

ಮಾ.9 ರಂದು ನಲ್ಲೂರು ಲಕ್ಷ್ಮಣರಾವ್ ರೇವಣಕರ್ ವಿರಚಿತ ಸುಭಾಷಿತ ಸಂಗ್ರಹಗಳ ಹೊತ್ತಿಗೆಗಳ ಲೋಕಾರ್ಪಣೆ

ದಾವಣಗೆರೆ: ದಾವಣಗೆರೆಯ ಪ್ರೇಮಾ ಅರುಣಾಚಲ ಎನ್.ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ನಲ್ಲೂರು
ಲಕ್ಷ್ಮಣ್‌ರಾವ್ ರೇವಣಕರ್ ವಿರಚಿತ 12, 13ನೇ ಭಾಗದ ಆಧ್ಯಾತ್ಮಿಕ ಪರಂಪರೆಯ ಸುಭಾಷಿತ ಸಂಗ್ರಹದ
ಹೊತ್ತಿಗೆಗಳ ಲೋಕಾರ್ಪಣೆ ಸಮಾರಂಭ ದಿನಾಂಕ 9-3-2024ನೇ ಶನಿವಾರ ಸಂಜೆ 6ಗಂಟೆಗೆ ದಾವಣಗೆರೆಯ
ವಿನೋಬನಗರ ಒಂದನೇ ಮುಖ್ಯರಸ್ತೆಯಲ್ಲಿರುವ ಗೌರಮ್ಮ ನರಹರಿಶೇಟ್ ಮಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕವಿತಾ ಗುರುಪ್ರಸಾದ್ ತಿಳಿಸಿದ್ದಾರೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ದಾವಣಗೆರೆ ಜಿಲ್ಲೆಯ ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಮಠದ ಪರಮಪೂಜ್ಯ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರುತ್ತಾರೆ. ಪುಸ್ತಕಗಳ ಲೋಕಾರ್ಪಣೆಯನ್ನು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತ
ಅಧಿಕಾರಿಗಳು, ಹಿರಿಯ ಸಾಹಿತಿ, ಶಿಕ್ಷಣ ತಜ್ಞರಾದ ಡಾ. ಎಚ್.ವಿ.ವಾಮದೇವಪ್ಪ ನೆರವೇರಿಸಲಿದ್ದಾರೆ. ಪ್ರತಿಷ್ಠಾನದ ಸಂಸ್ಥಾಪಕರಾದ ನಲ್ಲೂರು ಅರುಣಾಚಲ ಎನ್.ರೇವಣಕರ್, ದಾವಣಗೆರೆಯ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪ್ರಶಾಂತ್ ವಿಶ್ವನಾಥ್ ವರ್ಣೇಕರ್, ಉಡುಪಿ ಜಿಲ್ಲೆಯ ಸಾಲಿಗ್ರಾಮದ ಸರಸ್ವತಿ ದಾಶಪ್ಪ ಶೆಣೈ ಪ್ರತಿಷ್ಥಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ದಾವಣಗೆರೆಯ ಕಲಾಕುಂಚದ ಸಾಂಸ್ಕೃತಿಕ ಸಂಸ್ಥೆಯ ಗೌರವಾಧ್ಯಕ್ಷರು, ಲೋಕಾರ್ಪಣೆಯ ಕೃತಿಗಳ ವಿರುಚಿತರು ಆದ ನಲ್ಲೂರು ಲಕ್ಷ್ಮಣರಾವ್ ರೇವಣಕರ್
ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷರಾದ ಅನಿತಾ ರಾಜೇಶ್ ಪಾವಸ್ಕರ್
ತಿಳಿಸಿದ್ದಾರೆ.

ಕೃತಿಗಳ ಲೋಕಾರ್ಪಣೆ ಮೊದಲು ಅಪರಾಹ್ನ 3:3೦ಕ್ಕೆ ಸಾರ್ವಜನಿಕವಾಗಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಮುಕ್ತವಾದ
ವೇದಿಕೆ ಕಲ್ಪಿಸುವುದರೊಂದಿಗೆ ವಿವಿಧ ಉಚಿತ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯ ಈ ಅಪರೂಪದ ವೈಶಿಷ್ಠ ಪೂರ್ಣ ಸಮಾರಂಭಕ್ಕೆ ಆಧ್ಯಾತ್ಮ ಸಾಂಸ್ಕೃತಿಕ ಸಾಹಿತ್ಯ ಆಸಕ್ತ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪ್ರತಿಷ್ಥಾನದ
ಖಜಾಂಚಿ ಸೌಮ್ಯ ಸುಮಿತ್ ಅಣ್ವೇಕರ್ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular